ಎನ್‌ಸಿಸಿ ಆರ್‌ಡಿ ಕ್ಯಾಂಪ್‌ಗೆ ಆಳ್ವಾಸ್‌ನ ಐದು ವಿದ್ಯಾರ್ಥಿಗಳು

ಎನ್‌ಸಿಸಿ ಆರ್‌ಡಿ ಕ್ಯಾಂಪ್‌ಗೆ ಆಳ್ವಾಸ್‌ನ ಐದು ವಿದ್ಯಾರ್ಥಿಗಳು


ಮೂಡುಬಿದಿರೆ: ನವದೆಹಲಿಯಲ್ಲಿ ನಡೆಯಲಿರುವ 2025ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರಕ್ಕೆ (ಆರ್‌ಡಿಸಿ) ಆಳ್ವಾಸ್ ಶಿಕ್ಷಣ ಸಂಸ್ಥೆಯ ಎನ್‌ಸಿಸಿ ಘಟಕದ ಐದು ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ. 


ವಾಯುದಳ ವಿಭಾಗದಲ್ಲಿ ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿರುವ ಹಾರ್ದಿಕ್ ಶೆಟ್ಟಿ, ನಿರೂಪ್ ಎಸ್., ಜೇವಿಟಾ ಪರ್ಲ್ ಹಾಗೂ ಪ್ರಶಸ್ತಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಪ್ರಶಸ್ತಿ ಈ ಬಾರಿಯ ಪ್ರಧಾನ ಮಂತ್ರಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾಳೆ.  


ನೌಕಾದಳ ವಿಭಾಗದಲ್ಲಿ 5ನೇ ಕರ್ನಾಟಕ ನೌಕಾ ಘಟಕವನ್ನು ಪ್ರತಿನಿಧಿಸಲಿರುವ ಅಜ್‌ರಾಜ್ ಆಯ್ಕೆಯಾಗಿದ್ದಾರೆ.


ಆಳ್ವಾಸ್‌ನಿಂದ ಒಟ್ಟು 49 ಕೆಡೆಟ್‌ಗಳು ಭಾಗಿ:

ಇಲ್ಲಿಯವರೆಗೆ ಸಂಸ್ಥೆಯಿಂದ 44 ಕೆಡೆಟ್‌ಗಳು ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಬಾರಿಯ 5 ಜನರು ಸೇರಿದಂತೆ ಒಟ್ಟು 49 ವಿದ್ಯಾರ್ಥಿಗಳು ಆಳ್ವಾಸ್ ಒಂದೇ ಸಂಸ್ಥೆಯಿಂದ ಪಾಲ್ಗೊಳ್ಳುತ್ತಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ.  


ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ:

ಆಳ್ವಾಸ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ 57ಕ್ಕೂ ಅಧಿಕ ಸೇನಾ ಶಿಬಿರಗಳು ನಡೆದಿದ್ದು,  ಐದು ಸೇನಾ ನೇಮಕಾತಿ ರ‍್ಯಾಲಿಗಳು, ಅಗ್ನಿಪಥ ನೇಮಕಾತಿ ಪರೀಕ್ಷೆ ಸೇರಿದಂತೆ ಹತ್ತು ಹಲವು ಎನ್‌ಸಿಸಿಯ ಚಟುವಟಿಕೆಗಳು ಜರಗುತ್ತಿರುತ್ತವೆ. ಆಳ್ವಾಸ್ ಸಂಸ್ಥೆ ೪ ಭಾರಿ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ ಪಡೆದಿದೆ. ಆಳ್ವಾಸ್ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳು ಜಿಲ್ಲೆಯ ಹತ್ತು ಹಲವು ಕರ‍್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಕರ‍್ಯನಿರ್ವಹಿಸಿದ್ದು, ಸ್ವಚ್ಛತಾ ಚಟುವಟಿಕೆಗಳು, ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಇವರ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article