
ನೂತನ ಕಟ್ಟಡಕ್ಕೆ ಶಾಸಕ ಕಾಮತ್ ಶಿಲಾನ್ಯಾಸ
Wednesday, January 22, 2025
ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಣ್ಣೂರು ವಾರ್ಡ್ ಸಂಖ್ಯೆ 52ರಲ್ಲಿ ಯುವಕ ಮಂಡಲದ ಬಳಿ ಶಾಸಕರ ಅನುದಾನ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡದ ಶಿಲಾನ್ಯಾಸವನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಈ ಪರಿಸರದ ನಾಗರಿಕರ ಅನೇಕ ಕಾಲದ ಬೇಡಿಕೆಯು ಈ ಮೂಲಕ ನೆರವೇರುತ್ತಿದ್ದು, ಇಲ್ಲಿ ಮುಂದೆ ನಿರ್ಮಾಣಗೊಳ್ಳಲಿರುವ ಕಟ್ಟಡವು ಹತ್ತು ಹಲವು ಸಮಾಜಮುಖಿ ಕಾರ್ಯಗಳಿಗೆ ವೇದಿಕೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯೆ ಚಂದ್ರಾವತಿ ವಿಶ್ವನಾಥ್, ಸುಧೀರ್ ಶೆಟ್ಟಿ ಕಣ್ಣೂರು, ಸುರೇಶ್ ಪೂಜಾರಿ, ವಿವೇಕ್ ಸುವರ್ಣ, ನಿಖಿತ್ ಕೊಟ್ಟಾರಿ, ಯುವರಾಜ್ ಸುವರ್ಣ, ಜಗದೀಶ್ ಕೊಟ್ಟಾರಿ, ರಾಕೇಶ್ ಬಲ್ಲೂರು, ರಾಮಚಂದ್ರ, ಮೋನಪ್ಪ, ಕೃಷ್ಣಪ್ಪ ಪೂಜಾರಿ, ವಂಶಿ ಪಂಡಿತ್, ರಾಜೇಶ್ ಬಲ್ಲೂರು, ಸುನಿಲ್ ಕೊಡಕಲ್, ದೇವದಾಸ್ ಶೆಟ್ಟಿ, ಉದಯ ಪೂಜಾರಿ, ನವೀನ್ ಕುಲಾಲ್, ಮೈನಾಕ್ಷಿ ಟೀಚರ್, ಸಂಜೀವ ಕೊಲ್ತಾಡಿ, ನೀಲಯ್ಯ ಪೂಜಾರಿ, ದಿನೇಶ್ ಸುವರ್ಣ, ಸುಧಾಕರ್ ಶೆಟ್ಟಿ, ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.