ಪಡು ಕೊಣಾಜೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಸಂರಕ್ಷಣಾ ಮಾಹಿತಿ, ಪುಸ್ತಕ ವಿತರಣೆ

ಪಡು ಕೊಣಾಜೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಸಂರಕ್ಷಣಾ ಮಾಹಿತಿ, ಪುಸ್ತಕ ವಿತರಣೆ


ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಪಡು ಕೊಣಾಜೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಮಾಹಿತಿಯನ್ನು ನೀಡಲಾಯಿತು. 

ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ತರಬೇತುದಾರ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಅವರು ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು.


ಅವರು ತಮ್ಮ ಭಾಷಣದಲ್ಲಿ ಗ್ರಾಹಕನಿಗಿರುವ ಕಾನೂನು ರಕ್ಷಣೆ, ದಾಖಲೆಗಳನ್ನು ಪಡೆಯುವ ವಿಧಾನಗಳು, ಇತ್ಯಾದಿ ಸಮಗ್ರ ಮಾಹಿತಿಯನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕವನ್ನು ಶಾಲಾ ವಾಚನಾಲಯಕ್ಕೆ ಹಸ್ತಾಂತರಿಸಿದರು. ಶಿಕ್ಷಕ ಗಂಗಾಧರ ಪಾಟೀಲ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ  ಅನ್ನಪೂರ್ಣ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article