
ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೂಣ೯ಕಾಲಿಕ ವೈದ್ಯರ ನೇಮಕಕ್ಕೆ ಸಚಿವರಿಗೆ ಮನವಿ ಮಾಡಿದ ಪತ್ರಕತ೯
Friday, January 17, 2025
ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೂಣ೯ಕಾಲಿಕ ವೈದ್ಯರನ್ನು ನೇಮಕ ಮಾಡುವಂತೆ ಪತ್ರಕತ೯ ಅಶ್ರಫ್ ವಾಲ್ಪಾಡಿ ಅವರು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರಲ್ಲಿ ಶುಕ್ರವಾರ ಮನವಿ ಮಾಡಿದ್ದಾರೆ.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಹಕ್ಕುಪತ್ರ ವಿತರಣೆಗೆ ಆಗಮಿಸಿದ್ದ ಸಚಿವರಲ್ಲಿ ಮನವಿ ಮಾಡಿದ ಅಶ್ರಫ್ ಅವರು ಈ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಮತ್ತು ಶವ ಶೀತಲೀಕರಣ ಘಟಕದ ವ್ಯವಸ್ಥೆ ಕೂಡಾ ಶೀಘ್ರದಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ.