
ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ
Sunday, January 26, 2025
ಮೂಡುಬಿದಿರೆ: ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಿಗೆ ಮಹತ್ವ ನೀಡುತ್ತಾ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ಪ್ರತಿಯೋರ್ವರಿಗೂ ಸಂವಿಧಾನದ ಮೂಲಕ ನೀಡುತ್ತಾ ಬಂದಿದೆ. ನಮ್ಮ ವಿದ್ಯಾಭ್ಯಾಸದ ಚರಮ ಹಾಗೂ ಪರಮ ಲಕ್ಷ?ಯ ದೇಶಸೇವೆಯೇ ಆಗಿರಬೇಕು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅನುಸಂಧಾನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಡಿ.ಜೆ.ಸಿ.ಎನ್. ಜತೆ ನಿರ್ದೇಶಕ ಜಗದೀಶ್ ಬಲ್ಲಾಳ್ ತಿಳಿಸಿದರು.
ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ತಾಳ್ಮೆ ಮತ್ತು ಬ್ರಾತೃತ್ವದಿಂದ ಒಟ್ಟಿಗೆ ವಾಸಿಸುವ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಭಾರತೀಯರಿಗೆ ಈ ದಿನ ಅತ್ಯಂತ ಮಹತ್ವದ ದಿನ. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರೊಂದಿಗೆ ರಾಷ್ಟ್ರಭಕ್ತರಾಗೋಣ ಎಂದರು.
ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು. ಎನ್‌ಸಿಸಿ, ನೇವಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.