
ಪ್ರೀತಿ ಸಾಲ್ಯಾನ್ ಕೆ. ಅವರಿಗೆ ಪಿಹೆಚ್‌ಡಿ ಪದವಿ
Friday, January 17, 2025
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಸಾಲ್ಯಾನ್ ಕೆ. ಅವರು ‘ಡಿಸೈನ್ ಆಂಡ್ ಇಂಪ್ಲಿಮೆಂಟೇಶನ್ ಆಫ್ ಚೈಲ್ಡ್ ಆಕ್ಟಿವಿಟಿ ಡಿಟೆಕ್ಷನ್ ಆಂಡ್ ಅನಾಮೊಲಿ ಕ್ಲಾಸಿಫಿಕೇಶನ್ ಇನ್ ಹೆಲ್ತ್ಕೇರ್ ಯೂಸಿಂಗ್ ಡೀಪ್ ಲರ್ನಿಂಗ್ ಫ್ರೇಮ್ವರ್ಕ್ ಇನ್ ವೀಡಿಯೋ ಸೀಕ್ವೆನ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಇತ್ತೀಚೆಗೆ ಪಿಹೆಚ್‌ಡಿ ಪದವಿ ನೀಡಿದೆ.
ಇವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಂಜೀವ್ ಕುಲ್ಕರ್ಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.