
ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಮನವಿ ಸ್ವೀಕರಿಸಿದ ಸಂಸದ ಚೌಟ
ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಜ.24 ರಂದು ಸಾರ್ವಜನಿಕರದ ಅಹವಾಲು ಸ್ವೀಕರಿಸಿದರು.
ವಿದ್ಯುತ್, ರಸ್ತೆ ಮತ್ತು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಆಧಾರ್ ನೊಂದಣಿ ಸಮಸ್ಯೆ ಕುರಿತ ಸಮಸ್ಯೆಗಳನ್ನು ಸಾರ್ವಜನಿಕರು ಸಂಸದರ ಗಮನಕ್ಕೆ ತಂದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಪುರಭವನ ಅಭಿವೃದ್ಧಿಗೆ ಸುಳ್ಯ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದಿರೆ ಮನವಿ ನೀಡಿದರು.
ಅರಂಬೂರು ಸರಕಾರಿ ಶಾಲೆಗೆ ಶೌಷಾಲಯ ನಿರ್ಮಾಣಕ್ಕೆ, ಗಾಂಧಿನಗರ ಕೆಪಿಎಸ್ ಪ್ರೌಢ ಶಾಲಾ ವಿಭಾಗದಕ್ಕೆ ಸಭಾಂಗಣಕ್ಕೆ ಕಂಪೆನಿಗಳ ಸಿಎಸ್‌ಆರ್ ಫಂಡ್ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಆಲೆಟ್ಟಿ ಗ್ರಾಮಮ ಕೂರ್ನಡ್ಕ ಮತ್ತು ಬಡ್ಡಡ್ಕ ದಲ್ಲಿ ಮೊಬೈಲ್ ಫೋನ್ ಸಂಪರ್ಕ ಕಲ್ಪಿಸಿಕೊಡಲು ಮೊಬೈಲ್ ಟವರ್ ಕಾಮಗಾರಿಯನ್ನು ಪೂರ್ಣ ಮಾಡಿ ಕೊಡುವಂತೆ ಮನವಿ ನೀಡಿದರು.
ಸುಳ್ಯದಲ್ಲಿ ಆಧಾರ್ ನೋಂದಣಿ ಕೇಂದ್ರಗಳ ಕೊರತೆ ಇದ್ದು ನಗರ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಧಾರ್ ಕೇಂದ್ರ ಒದಗಿಸುವಂತೆ ದುಗಲಡ್ಕ ಮತ್ತು ಕೊಯಿಕುಳಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಮಾಡಿಕೊಡುವಂತೆ ಸ್ಥಳೀಯ ನಿವಾಸಿ ಹೇಮಂತ್ ಕುಮಾರ್ ಕಂದಡ್ಕರವರು ಮನವಿ ನೀಡಿದರು.
ಆರ್ತಾಜೆ ನಡುಬೆಟ್ಟು ಸಿಂಗಲ್ ಪೇಸ್‌ನಿಂದ ತ್ರೀ ಪೇಸ್ ವಿದ್ಯುತ್ ಲೈನ್ ಒದಗಿಸುವಂತೆ ಸ್ಥಳೀಯ ನಿವಾಸಿ ವೆಂಕಟೇಶ್ ನಡುಬೆಟ್ಟು ಮನವಿ ನೀಡಿದರು. ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಹಾಗೂ ನಾಮ ನಿರ್ದೇಶಕ ಸದಸ್ಯ ಸಿದ್ಧಿಕ್ ಕೊಕ್ಕೋ ಮನವಿ ನೀಡಿದರು. ಸುಳ್ಯದಲ್ಲಿ ವಿದ್ಯುತ್ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರುಗಳಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಹರೀಶ್ ಬೂಡುಪನ್ನೆ, ಸುಳ್ಯ ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ. ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.