
ಫೆ.1 ರಂದು ಹಿಂದೂ ಯುವ ಸೇನೆ, ಅನ್ನಪೂರ್ಣೇಶ್ವರೀ ಶಾಖೆ ಕುಡುಂಬೂರು ವತಿಯಿಂದ ಬೈಕಂಪಾಡಿಯ ಮುಂಗಾರುನಲ್ಲಿ ಸತ್ಯನಾರಾಯಣ ಪೂಜೆ
Monday, January 27, 2025
ಸುರತ್ಕಲ್: ಹಿಂದೂ ಯುವ ಸೇನೆ ಅನ್ನಪೂರ್ಣೇಶ್ವರೀ ಶಾಖೆ, ಕುಡುಂಬೂರು ಇವರಿಂದ ಫೆ.1 ರಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರುನಲ್ಲಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ವೇದಮೂರ್ತಿ ಮಹೇಶ್ ಮೂರ್ತಿ ಸುರತ್ಕಲ್ ಇವರ ನೇತೃತ್ವದಲ್ಲಿ 30ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರುಗಲಿದೆ.
ಬೆಳಿಗ್ಗೆ 8 ಗಂಟೆಗೆ ಗಣಹೋಮ, 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ "ಅನ್ನ ಸಂತರ್ಪಣೆ" ಕಾರ್ಯಕ್ರಮ ನಡೆಯಲಿರುವುದು. ಸಂಜೆ 6.30 ರಿಂದ ಕುಡುಂಬೂರು ಕೇಂದ್ರ ಮೈದಾನದಲ್ಲಿ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 7.30ಕ್ಕೆ ಸ್ಥಳೀಯ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.