ಫೆ.22 ರಂದು ವೀರ ರಾಣಿ ಅಬ್ಬಕ್ಕ ಉತ್ಸವ

ಫೆ.22 ರಂದು ವೀರ ರಾಣಿ ಅಬ್ಬಕ್ಕ ಉತ್ಸವ

ಉಳ್ಳಾಲ: ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆಸಿಕೊಂಡು ಬರುವ 27ನೇ ವರ್ಷದ ವೀರ ರಾಣಿ ಅಬ್ಬಕ್ಕ ಉತ್ಸವ 2024-25 ಕಾರ್ಯಕ್ರಮ ವು ಫೆ.22ರಂದು  ಉಳ್ಳಾಲ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೇಯಲಿದೆ ಎಂದು ಸ್ವಾಗತಾಧ್ಯಕ್ಷ ಕೆ. ಜಯರಾಮ್ ಶೆಟ್ಟಿ ತಿಳಿಸಿದ್ದಾರೆ 

ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ಕಾರ್ಯಕ್ರಮವು ಜಾನಪದ ದಿಬ್ಬಣ, ವಂದನಾ ಕಾರ್ಯಕ್ರಮ,ಜಾನಪದ ಪ್ರದರ್ಶನ, ಸ್ಥಳೀಯ ಕಾರ್ಯಕ್ರಮ, ಕೊಂಕಣಿ ಬ್ಯಾರಿ, ಕಾರ್ಯಕ್ರಮ, ಕವಿಗೋಷ್ಠಿ,ಪಟ್ಲ ಸತೀಶ ಶೆಟ್ಟಿ ಅವರಿಂದ ಕಾರ್ಯಕ್ರಮ, ಸ್ವಾಗತ ನೃತ್ಯ, ಸಮಾರೋಪ ಸಮಾರಂಭ, ಹಾಸ್ಯ ಕಾರ್ಯಕ್ರಮ,ನಾಟಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಇಬ್ಬರು ಮಹಿಳೆಯರಿಗೆ ಅಬ್ಬಕ್ಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ದಾನಿಗಳ ದೇಣಿಗೆಯಿಂದ ಕಾರ್ಯಕ್ರಮ: 

ಅಬ್ಬಕ್ಕ ಉತ್ಸವ ಕಾರ್ಯಕ್ರಮಕ್ಕೆ ಸರ್ಕಾರ ದ ಅನುದಾನ ಸಿಗುತ್ತಿಲ್ಲ. ಅನುದಾನ ನೀಡುವಂತೆ ಬೇಡಿಕೊಂಡರೂ ಜಿಲ್ಲಾಡಳಿತ ನೀಡುತ್ತಿಲ್ಲ ಈ ಕಾರಣದಿಂದ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಸಮಿತಿ ತೀರ್ಮಾನ ಅಂತಿಮ ಎಂದು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಹೇಳಿದರು. 

ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಗೌರವಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಕಾರ್ಯದರ್ಶಿ ಗಳಾದ ಸತೀಶ್ ಭಂಡಾರಿ, ಶಶಿ ಕಾಂತ್ ಉಳ್ಳಾಲ, ಶಶಿ ಕಲ ಗಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article