
ಜ.14 ರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆ
Monday, January 13, 2025
ವಿಟ್ಲ: ಪಾಂಡವರ ಕಾಲದ ಇತಿಹಾಸವುಳ್ಳ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯು ಜನವರಿ 14 ರಂದು ಪ್ರಾರಂಭಗೊಂಡು ಜನವರಿ 23 ರ ತನಕ ವಿಜೃಂಭಣೆಯೊಂದಿಗೆ ಜರಗಲಿದೆ.
ಜನವರಿ 14 ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಲಿದೆ. ಜ.15, 16, ಹಾಗೂ 17 ರಂದು ರಾತ್ರಿ ನಿತ್ಯೋತ್ಸವ ಜರಗಲಿದೆ. ಜ.೧೮ ರಂದು ರಾತ್ರಿ ವಿಟ್ಲ ಸನಿಹದ ಕೇಪು ಎಂಬಲ್ಲಿಂದ ಶ್ರೀ ಮಲರಾಯ ದೈವದ ಭಂಡಾರವು ಆಗಮಿಸಲಿದ್ದು ರಾತ್ರಿ ಬಯ್ಯದಬಲಿ ಉತ್ಸವ ನಡೆಯಲಿದೆ. ಸಣ್ಣ ರಥೋತ್ಸವ ಇದೆ. ಜ.19 ರಂದು ರಾತ್ರಿ ಪೂಜಾ ಕಾರ್ಯಕ್ರಮವಿದೆ. ಜ.20 ರಂದು ಹೂತೇರು ಕಾರ‍್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ‍್ಯಕ್ರಮವಾಗಿ ವಿಟ್ಲೋತ್ಸವ ಜರಗಲಿದೆ.
ಜ.21 ರಂದು ರಾತ್ರಿ ಮಹಾರಥೋತ್ಸವವು ಬೆಡಿಮದ್ದುಗಳ ಸಡಗರದೊಂದಿಗೆ ನಡೆಯಲಿದೆ. ಜ.23 ರಂದು ಧ್ವಜಾವರೋಹಣ ನಡೆಯಲಿದೆ.