
ಆರ್ಚಕರಿಗೆ ಢಿಕ್ಕಿಯಾದ ಡ್ರೋಣ್
Thursday, January 23, 2025
ವಿಟ್ಲ: ಬಂಟ್ವಾಳ ತಾಲೂಕು ವಿಟ್ಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ನಿಯಂತ್ರಣ ತಪ್ಪಿದ ಡ್ರೋಣ್ ದೇವರ ಪ್ರಭಾವಳಿಗೆ ಹಾಗೂ ಆರ್ಚಕರಿಗೆ ಡಿಕ್ಕಿ ಹೊಡೆದ ಘಟನೆ ಕಳೆದ ರಾತ್ರಿ ನಡೆದಿದೆ.
ರಥ ಏರುವ ಹೊತ್ತಿಗೆ ದೇವರ ಉತ್ಸವ ಮೂರ್ತಿಗೆ ಡ್ರೋಣ್ ಬಡಿದಿದೆ. ಬಳಿಕ ರಥದ ಮೇಲಿದ್ದ ಸಹಾಯಕ ಅರ್ಚಕರ ತಲೆಗೆ ಬಡಿದು ಬಿದ್ದಿದೆ. ಒಮ್ಮೆಗೆ ಈ ಘಟನೆಯಿಂದ ದೇವರ ಮೂರ್ತಿ ಹೊತ್ತ ಅರ್ಚಕರು ತಬ್ಬಿಬ್ಬಾಗಿದ್ದಾರೆ.
ಅವರು ಕೊಂಚ ನಿಯಂತ್ರಣ ತಪ್ಪಿದ್ದರೂ ದೇವರ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ತಕ್ಷಣ ಸಹ ಅರ್ಚಕರು ಡ್ರೋಣ್‌ನ್ನು ಎಸೆದಿದ್ದಾರೆ. ಡ್ರೋಣ್ ಅಪರೇಟರ್ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.