ಆರಂಬೋಡಿ ನದಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಆರಂಬೋಡಿ ನದಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು


ಬೆಳ್ತಂಗಡಿ: ನದಿಗೆ ಬಿದ್ದು ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಎಂಬಲ್ಲಿ ಫೆ.23 ರ ಮಧ್ಯಾಹ್ನ ನಡೆದಿದೆ.

ರಾಮಕುಂಜ ಎಂಬಲ್ಲಿಯ ಹತ್ತನೇ ತರಗತಿಯಲ್ಲಿ ಕಲಿಯುತಿದ್ದ ವಿದ್ಯಾರ್ಥಿ ಪವನ್ (16) ಎಂದು ಗುರುತಿಸಲಾಗಿದೆ.

ಆರಂಬೋಡಿಯಲ್ಲಿರುವ ಅಜ್ಜಿ ಮನೆಯಿಂದ ಸಿದ್ಧಕಟ್ಟೆಯ ಶಾಲೆಗೆ ಹೋಗುತಿದ್ದು, ಭಾನುವಾರ ಮನೆ ಸಮೀಪದ ಫಲ್ಗುಣಿ ನದಿಯತ್ತ ಹೋಗಿದ್ದು ಈ ವೇಳೆ ಜಾರಿ ಬಿದ್ದು ಸಾವನ್ನಪ್ಪಿದ್ದು, ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article