
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮೌನ ಮುಷ್ಕರ
Monday, February 10, 2025
ದೇರಳಕಟ್ಟೆ: ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಇದರ ಆಶ್ರಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮೌನ ಮುಷ್ಕರ ನಾಟೆಕಲ್ ತಹಶೀಲ್ದಾರ್ ಕಚೇರಿ ಮುಂಭಾಗ ಸೋಮವಾರ ನಡೆಯಿತು.
ಗ್ರಾಮಕರಣಿಕರಿಗೆ ಕೆಲಸದ ಒತ್ತಡ ಜಾಸ್ತಿ ಇದೆ. ವೇತನ ಸರಿಯಾಗಿ ಇಲ್ಲ. ಆದರೆ ಸಮರ್ಪಕವಾದ ಕಚೇರಿ, ಕಂಪ್ಯೂಟರ್, ಮೇಜು ಇವ್ಯಾವ ವ್ಯವಸ್ಥೆ ಕೂಡ ಸರ್ಕಾರ ಮಾಡಿಲ್ಲ. ದಾಖಲೆಗಳನ್ನು ನಾವು ಸೈಬರ್‌ಗೆ ಹೋಗಿ ತಿದ್ದುಪಡಿ, ಅಪ್ ಲೋಡ್ ಮಾಡಬೇಕು. ಡಾಟಾ ನಮ್ಮದೇ ಬಳಕೆ ಮಾಡಬೇಕು. ಕಳೆದ ಐದು ತಿಂಗಳಿAದ ಈ ಸಮಸ್ಯೆ ಇದೆ.ಸರ್ಕಾರ ಈ ಸಮಸ್ಯೆ ಇತ್ಯರ್ಥ ಪಡಿಸುತ್ತಿಲ್ಲ. ನಮಗೆ ಅಗತ್ಯ ಇರುವ ಸೇವೆಯನ್ನು ಸರ್ಕಾರ ನೀಡುತ್ತಿಲ್ಲ. ವೇತನ ಸಹಿತ ಇತರ ಮೂಲಭೂತ ಸೌಕರ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿ ಮೌನ ಮುಷ್ಕರ ಮಾಡುತ್ತೇವೆ ಎಂದು ಬಾಳೆಪುಣಿ, ಇರಾ ಗ್ರಾಮದ ಗ್ರಾಮಕರಣಿಕ ಲಿಂಗಪ್ಪ ಮಾಧ್ಯಮದ ಮುಂದೆ ನೋವು ತೋಡಿಕೊಂಡರು.
ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮಕರಣಿಕರು ಈ ಮೌನ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.