ತರಕಾರಿ ಮಾರುಕಟ್ಟೆಯ ಸುಂಕ ವಸೂಲಿ ಗುತ್ತಿಗೆ ರದ್ದು ಪಡಿಸಿದ ಪುರಸಭೆ

ತರಕಾರಿ ಮಾರುಕಟ್ಟೆಯ ಸುಂಕ ವಸೂಲಿ ಗುತ್ತಿಗೆ ರದ್ದು ಪಡಿಸಿದ ಪುರಸಭೆ


ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದಲ್ಲಿ ಕಾಯ೯ಚರಿಸುತ್ತಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ವರಿ ವಸೂಲಿನ ಗುತ್ತಿಗೆಯನ್ನು ಪುರಸಭೆಯು ಸೋಮವಾರ ಸಂಜೆ ರದ್ದುಪಡಿಸಿದೆ.

ಕಳೆದ ಡಿಸೆಂಬರ್ 20 ರಂದು ನಡೆದಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ನಿಡ್ಡೋಡಿಯ ಸುಂದರ ಪೂಜಾರಿ ಅವರು ಅತೀ ಹೆಚ್ಚು ಬಿಡ್ಡು (42,00,350) +7,56,073 (18% ಜಿ.ಎಸ್.ಟಿ)ದಾರರಾಗಿ ವರಿವಸೂಲಿನ ಹಕ್ಕನ್ನು ಪಡೆದಿದ್ದರು.

ಆದರೆ ಸುಂಕ ವಸೂಲಿ ವಿಚಾರದಲ್ಲಿ ಮಾಕೆ೯ಟ್‌ನಲ್ಲಿ ಆಗಾಗ ಗಲಾಟೆಯಾಗಿರುವುದರಿಂದ ಮತ್ತು ಫೆ.10 ರಂದು ಅನಧಿಕೃತವಾಗಿ ಸೀಯಾಳಗಳನ್ನು ಇರಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಮಾತಿನ ಜಟಾಪಟಿ ನಡೆದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ತೆರವುಗೊಳಿಸಲು ಪುರಸಭೆಗೆ ಸೂಚಿಸಿದ್ದರಿಂದ ಅಧಿಕಾರಿಗಳು ತೆರವುಗೊಳಿಸಿದ್ದರು.

ಇದೇ ಸಂದಭ೯ದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಗುತ್ತಿಗೆಯನ್ನು ಸಂಜೆಯೊಳಗಡೆ ಕ್ಯಾನ್ಸಲ್ ಮಾಡುವಂತೆ ಸೂಚಿಸಿದ್ದರು. 

ಏಲಂ ಶರ್ತದ ಪ್ರಕಾರ ಬಿಡ್ಡಿನ ಪೂರ್ಣ ಮೊತ್ತವನ್ನು ಏಕಗಂಟಿನಲ್ಲಿ ಪಾವತಿಸದೆ ಇರುವುದರಿಂದ ಈ ಗುತ್ತಿಗೆಯನ್ನು ಪುರಸಭೆಯು ರದ್ದುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article