ಫೆ.15 ರಂದು ಲೋಕಮಾತ ಅಹಲ್ಯಾದೇವಿ ಹೋಳ್ಕರ್‌ರವರ 300ನೇ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭ

ಫೆ.15 ರಂದು ಲೋಕಮಾತ ಅಹಲ್ಯಾದೇವಿ ಹೋಳ್ಕರ್‌ರವರ 300ನೇ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭ


ಮಂಗಳೂರು: ಲೋಕಮಾತ ಅಹಲ್ಯಾದೇವಿ ಹೋಳ್ಕರ್‌ರವರ 300ನೇ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭ ಫೆ.15ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ವರ್ಷಾಚರಣ ಸಮಿತಿಯ ರಾಜ್ಯ ಸ್ವಾಗತ ಸಮಿತಿಯ ಸದಸ್ಯ ವೀಣಾ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೂರ್ವಾಹ್ನ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶಿಕ್ಷಣ ತಜ್ಞರಾದ ಡಾ. ಗೀತಾ ರಾಮಾನುಜಮ್ ಪ್ರಧಾನ ವಕ್ತಾರರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು, ಪ್ರದರ್ಶಿನಿ, ಸಾಕ್ಷಚಿತ್ರ, ನೃತ್ಯ ರೂಪಕ, ದ್ವಿಚಕ್ರ ವಾಹನ ರ‍್ಯಾಲಿ ನಡೆಯಲಿದೆ. ದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್, ಪುಣೆಯ ಲೇಖಕಿ ಶೆಫಾಲಿ ವೈದ್ಯ, ಸಾಮಾಜಿಕ ಕಾರ್ಯಕರ್ತ ಡಾ. ಜಯಪ್ರಕಾಶ್ ಮುಂತಾದವರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು ಎಂದವರು ತಿಳಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಂದ ಆಯ್ದ ಒಂದು ಸಾವಿರಕ್ಕೂ ಅಽಕ ಮಹಿಳೆಯರು, ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಅವರು ಸಮಾಪನ ಮಾತುಗಳನ್ನಾಡಲಿದ್ದಾರೆ ಎಂದು ವೀಣಾ ಶೆಟ್ಟಿ ತಿಳಿಸಿದರು.

1725ರಲ್ಲಿ ಜನಿಸಿದ ಅಹಲ್ಯಾದೇವಿ ಹೋಳ್ಕರ್ ಅವರು ಇಂದೋರ್‌ನ ರಾಣಿಯಾಗಿ 28 ವರ್ಷಗಳ ಆಡಳಿತ ನಡೆಸಿದ್ದರು. ರಾಜಕೀಯ, ಧಾರ್ಮಿಕ, ನ್ಯಾಯಪರ, ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಶ್ರೇಷ್ಠ ಸಾಧನೆಯನ್ನು ಅವರು ಆ ಕಾಲದಲ್ಲಿ ಮಾಡಿದ್ದರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಮತ್ತು ಅವರ ಸಾಧನೆಗಳು ಜನಮಾನಸಕ್ಕೆ ತಲುಪಬೇಕೆಂಬ ನಿಟ್ಟಿನಲ್ಲಿ ಹೋಳ್ಕರ್‌ರವರ 300ನೇ ಜನ್ಮ ವರ್ಷಾಚರಣ ಸಮಿತಿ ಮಂಗಳೂರು ಘಟಕ ನಿರಂತರವಾಗಿ ಒಂದು ವರ್ಷಗಳ ಕಾಲ ನಿನಿಧ ಶಾಲಾ ಕಾಲೇಜುಗಳು, ಮಹಿಳಾ ಸಂಘಟನೆಗಳು, ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈ ವರ್ಷಾಚರಣೆಯ ಸಮಾರೋ ಫೆ.15ರಂದು ನಡೆಯುತ್ತಿದೆ. ಆದರೆ ಜಾಗೃತಿಯ ಕಾರ್ಯಗಳು ನಿರಂತರವಾಗಿ ನಡೆಯಲಿವೆ  ಎಂದು ವಿಭಾಗ ಸಂಯೋಜಕರಾದ ಕುಮುದಿನಿ ಶೆಣೈ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂತ ಸಂಯೋಜಕ ರವೀಂದ್ರ ಪುತ್ತೂರು, ವ್ಯವಸ್ಥಾಪಕ ರಮೇಶ್ ಕೆ., ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಡಾ. ಮಾಧವ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article