.jpeg)
ಮಾ.3 ರಿಂದ ರಾಜ್ಯ ಬಜೆಟ್ ಅಧಿವೇಶನ
Wednesday, February 26, 2025
ಮಂಗಳೂರು: ಮಾ.3ರಿಂದ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಸಂದೇಶ ನೀಡಲಿದ್ದಾರೆ. ಮಾ.3ರಿಂದ 7ರವರೆಗೆ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆಯುತ್ತದೆ. ಮಾ.7ರಂದು ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡುತ್ತಾರೆ. ಅಲ್ಲಿಂದ ಮಾ.21ರವರೆಗೆ ಬಜೆಟ್ ಮೇಲೆ ಚರ್ಚೆ ಹಾಗೂ ಸರ್ಕಾರದ ಉತ್ತರ, ವಿವಿಧ ಬಿಲ್‌ಗಳ ಮಂಡನೆ ಇನ್ನಿತರ ಕಾರ್ಯಕಲಾಪಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಈಗ ಉದ್ದೇಶಿಸಿರುವ ಪ್ರಕಾರ ಮಾ.೩ರಿಂದ 21ರವರೆಗೆ ಅಧಿವೇಶನ ನಡೆಸಲಾಗುತ್ತದೆ. ಮಾ.3ರಂದು ಮಧ್ಯಾಹ್ನ ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಅಧಿವೇಶನದ ಅವಧಿ ಹಾಗೂ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.