
ನೂತನ ಮಂಟಪದಲ್ಲಿ ಘಂಟೆ ಉದ್ಘಾಟನೆ
Wednesday, February 26, 2025
ಉಜಿರೆ: ಬೆಂಗಳೂರಿನ ಉದ್ಯಮಿಯಾದ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ. ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ ಬೃಹತ್ ಘಂಟೆಯನ್ನು ಬುಧವಾರ ಶಿವರಾತ್ರಿಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ನಿರ್ಮಿಸಿದ ನೂತನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೆಗ್ಗಡೆಯವರು ದಾನಿಗಳನ್ನು ಗೌರವಿಸಿದರು.