ಪ್ರತಾಪ್ ಸಿಂಹ ಓರ್ವ ಭಯೋತ್ಪಾದಕ
ಮಂಗಳೂರು: ಇತ್ತೀಚೆಗೆ ಮೈಸೂರಿನ ಉದಯಗಿರಿ ಘಟನೆಗೆ ಸಂಬಂಧಿಸಿ ಪ್ರತಾಪ್ ಸಿಂಹ ಪ್ರತಿಕ್ರಿಯಿಸುತ್ತಾ, ಮುಸ್ಲಿಮರು, ಪಾಕಿಸ್ತಾನ, 1947 ಎಂಬಿತ್ಯಾದಿಯಾಗಿ ಮುಸ್ಲಿಮರನ್ನು ಹೀಯಾಳಿಸುವುದು ಬಿಟ್ಟರೆ ಇವರ ಬಾಯಲ್ಲಿ ಇತರ ಉಚ್ಚಾರವೇ ಇಲ್ಲ. ದೊಡ್ಡ ನಾಡ ಪ್ರೇಮಿಯಂತೆ ಮಾತನಾಡುವ ಪ್ರತಾಪ್ ಸಿಂಹ ತನ್ನಿಂದ ಪಾಸು ಪಡೆದುಕೊಂಡ ವ್ಯಕ್ತಿ ಸಂಸತ್ ಭವನದ ಸಾರ್ವಜನಿಕ ಗ್ಯಾಲರಿಯಲ್ಲಿ ಸ್ಫೋಟಕ ಸಿಡಿಸಿ ಭಯ ಸೃಷ್ಟಿಸಿದ ವಿಷಯವನ್ನು ಮರೆತಿರಬೇಕು.
ಇಂದು ಮುಸ್ಲಿಮರ ದೇಶ ಪ್ರೇಮವನ್ನು ಅಳೆಯಲು ಇವರಿಗೆ ಏನು ನೈತಿಕತೆ ಇದೆ ಎಂದು ಹೇಳಲಿ. ಶಾಂತವಾಗಿದ್ದ ಸಕ್ಕರೆ ನಾಡಿಗೆ ಅಗ್ನಿ ಸ್ಪರ್ಶ ಮಾಡಲು ಹೊರಟ ಪ್ರತಾಪ್ ಸಿಂಹನ ವಿರುದ್ಧ ಸಿದ್ದರಾಮಯ್ಯ ಸರಕಾರ ಮತೀಯ ವಿದ್ವೇಷ ಪ್ರಕರಣ ದಾಖಲಿಸಲಿ. ದೇಶ ಬಿಟ್ಟು ತೊಲಗಬೇಕಾಗಿದ್ದು ಈ ದೇಶದ ಮುಸ್ಲಿಮರು ಅಲ್ಲ, ಬದಲಾಗಿ ದೇಶದ ಶಕ್ತಿ ಕೇಂದ್ರ ಸಂಸತ್ ಭವನಕ್ಕೆ ತನ್ನ ಪಾಸ್ ಕೊಟ್ಟು ಇತರರನ್ನು ಸಂಸತ್ ಭವನದ ಒಳ ಪ್ರವೇಶಿಸಿ ಸ್ಫೋಟಕ ಸಿಡಿಸಲು ಕಾರಣರಾದ ದೇಶ ದ್ರೋಹಿ, ಭಯೋತ್ಪಾದಕ ಪ್ರತಾಪ್ ಸಂಹ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.