ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ


ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೊಬೆಲ್ ಪಾರಿತೋಷಕ ವಿಜೇತ ವಿಶ್ವ ಕಂಡ ಭಾರತದ ಶ್ರೇಷ್ಠ ವಿಜ್ಞಾನಿ ಡಾ. ಸಿ.ವಿ. ರಾಮನ್ ಅವರ ಸ್ಮರಣೆಯಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್‌ನ ಪ್ರಾದ್ಯಾಪಕ ಡಾ. ಅರುಣ್ ಇಸ್ಲೂರು ಉದ್ಘಾಟಿಸಿ ಮಾತನಾಡಿ, ನಮ್ಮ ಪುರಾತನ ಕಾಲದಲ್ಲಿ ಗಾಂಧಾರಿ ವಿದ್ಯೆಯಂತಹ ಸಾಕಷ್ಟು ವಿದ್ಯೆಗಳಿದ್ದವು ಅದೊಂದು ವಿಜ್ಞಾನವೇ ಆಗಿದೆ. ಆದರೆ ಈಗಿನ ಕಾಲದಲ್ಲಿ ಆಧುನಿಕ  ವಿಜ್ಞಾನವನ್ನು ಕಲಿಯುತ್ತ ಕೆಲವೊಂದು ನಮ್ಮ ಪುರಾತನ ವೈಜ್ಞಾನಿಕ ಕಲೆಗಳನ್ನು ಈಗಿನ ಮಕ್ಕಳು ಮರೆಯುತ್ತಿದ್ದಾರೆ. ಆದರೆ ಶಕ್ತಿ ಶಾಲೆಯ ವಿದ್ಯಾರ್ಥಿಗಳು ಗಾಂಧಾರಿ ವಿದ್ಯೆಯನ್ನು ಕಲಿಯುತ್ತ ಇರುವುದು ನನಗೆ ಬಹಳ ಸಂತೋಷವಾಗಿದೆ. ಸಿ.ವಿ. ರಾಮನ್ ಅವರು ಭೌತಶಾಸ್ತ್ರಕ್ಕೆ ನೀಡಿದ ಅದ್ಭುತ ಕೊಡುಗೆಯನ್ನು ಸ್ಮರಿಸುತ್ತ ಇಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಭೌತಶಾಸ್ತ್ರಕ್ಕೆ ಅವರು ನೀಡಿದ ಅದ್ಭುತ ಕೊಡುಗೆಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ  ನೊಬೆಲ್ ಪಾರಿತೋಷಕ ವನ್ನು ಪಡೆದ ಕೀರ್ತಿ ಸಿ.ವಿ. ರಾಮನ್ ಅವರದ್ದು, ಮಕ್ಕಳಾದವರು ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಪ್ರಶ್ನೆ ಕೇಳುವಲ್ಲಿ ಯಾವುದೇ ಹಿಂಜರಿಕೆ ಬೇಡ. ಈ ವರ್ಷ ಭಾರತದಲ್ಲಿ ನಮ್ಮ ಯುವಕರನ್ನು ಜಾಗತಿಕ ನಾಯಕರಾನ್ನಾಗಿ ಮಾಡುವ ‘ವಿಕಸಿತಾ ಭಾರತ’ ಎಂಬ ವಿಷಯವು ಈ ವರ್ಷದ ವಿಜ್ಞಾನ ದಿನಾಚರಣೆಯ ಮುಖ್ಯ ವಿಷಯವಾಗಿದೆ. ಶಕ್ತಿ ಶಾಲೆಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತ ಇರೋದು ವಿಜ್ಞಾನ ದ ಪ್ರಚಾರಕ್ಕೆ ಪೂರಕವಾಗಿದೆ. ಮತ್ತೊಮ್ಮೆ ಮಕ್ಕಳಿಗೆ ವಿಜ್ಞಾನ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸೋಹಮ್ ಮತ್ತು ಶ್ರೇಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ವಿವಿಧ ಬಗೆಯ ಬಣ್ಣಗಳನ್ನು, ವಸ್ತುಗಳನ್ನು, ಹಣ್ಣುಗಳನ್ನು, ತರಕಾರಿಗಳನ್ನು ಮತ್ತು ಕರೆನ್ಸಿ ನೋಟ್‌ಗಳನ್ನು ಗುರುತಿಸಿ, ಪುಸ್ತಕವನ್ನು ಓದಿ, ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಗಾಂಧಾರಿ ವಿದ್ಯೆಯನ್ನು ಪ್ರದರ್ಶನ ಮಾಡಿದ್ದು ಆಕರ್ಷಣಿಯವಾಗಿತ್ತು.


ವಿದ್ಯಾ ಭಾರತಿಯ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ವಿಜ್ಞಾನ ಮೇಳ ಒಳಗೊಂಡು ಅಂತರಾಷ್ಟ್ರೀಯ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿದ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾಯ್ಕ್ ಪ್ರದರ್ಶಿಸಿದ ವಿಜ್ಞಾನ ಮಾದರಿಯ ಬಗ್ಗೆ ವಿವರಿಸಿದನು. ನಂತರ ಆಯ್ದ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುವ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಏರ್ಪಡಿಸಲಾಯಿತು. ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಅತಿಥಿಗಳಾದ ಅರುಣ್ ಅವರು ಉತ್ತರಿಸುವ ಮೂಲಕ ಮಕ್ಕಳಲ್ಲಿ ಪ್ರಶ್ನಿಸುವ ಕಲೆಯನ್ನು ಪ್ರೋತ್ಸಾಹಿದರು.


ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಶಕ್ತಿ ವಿದ್ಯಾ ಸಂಸ್ಥೆಯು ವಿಜ್ಞಾನದಲ್ಲಿ ಪ್ರಯೋಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಗುರುತಿಸಿ ಅವರನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ವಿಜ್ಞಾನ ದಿನವು ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ತರಲೆಂದು ಶುಭ ಹಾರೈಸಿದರು.


ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್. ಉಪಸ್ಥಿತರಿದ್ದರು.


ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮನಸ್ವಿ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕಿ ಮಧುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article