ನಾಳೆಯಿಂದ ಸುರತ್ಕಲ್‌ನಲ್ಲಿ ಶ್ರೀ ಅಮರನಾಥ ಶಿವಲಿಂಗ ದರ್ಶನ

ನಾಳೆಯಿಂದ ಸುರತ್ಕಲ್‌ನಲ್ಲಿ ಶ್ರೀ ಅಮರನಾಥ ಶಿವಲಿಂಗ ದರ್ಶನ

ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸುರತ್ಕಲ್ ಇದರ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಫೆ.23ರಿಂದ 28ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಸುರತ್ಕಲ್‌ನ ಕಾಂತೇರಿ ಧೂಮಾವತಿ ದೈವಸ್ಥಾನದ ಬಳಿಯ ಕರ್ನಾಟಕ ಸೇವಾವೃಂದದ ಸಭಾಂಗಣದಲ್ಲಿ ಉಚಿತ ‘ಅಮರನಾಥ ಶಿವಲಿಂಗ ದರ್ಶನ ’ ಏರ್ಪಡಿಸಲಾಗಿದೆ.

ಪ್ರತೀ ದಿನ ಬೆಳಗ್ಗೆ 7ರಿಂದ ೮ರವರೆಗೆ ಹಾಗೂ ಸಂಜೆ 6 ರಿಂದ 7ರವರೆಗೆ ಶಿವಧ್ಯಾನ ಶಿಬಿರ ನಡೆಯಲಿದೆ. ಫೆ.23ರಂದು ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article