
‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ: ಸ್ವಾಮಿ ಜಿತಕಾಮನಂದ ಜೀ ಮಹಾರಾಜ್
Wednesday, February 5, 2025
ಮಂಗಳೂರು: ಜ್ಞಾನಿಗಳು ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂದಿರುತ್ತಾರೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ ಎಂದು ಸ್ವಾಮಿ ಜಿತಕಾಮನಂದ ಜೀ ಮಾಹಾರಾಜ್ ಹೇಳಿದರು.
ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನ ಸಮೀಪದ ರಾಮಕೃಷ್ಣ ಮಠ ಹಾಗೂ ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ಫೆ.4 ರಂದು ರಥಸಪ್ತಮಿಯ ಪ್ರಯುಕ್ತ ರಾಮಕೃಷ್ಣ ಮಠದ ಅಂಗಳದಲ್ಲಿ ಸೂರ್ಯನಮಸ್ಕಾರದ ಅಭ್ಯಾಸದಲ್ಲಿ ಅವರು ಆಶೀರ್ವಚನ ನೀಡಿದರು.
ಸಪ್ತಮಿಯು ಹಿಂದೂ ಸೂರ್ಯ ದೇವರಾದ ಭಗವಾನ್ ಸೂರ್ಯನಿಗೆ ಸಮರ್ಪಿತವಗಿದೆ. ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ, ಭಗವಾನ್ ಸೂರ್ಯ ಏಳು ಕುದುರೆಗಳಿಂದ ಓಡಿಸುವ ರಥವನ್ನು ಸವಾರಿ ಮಾಡುತ್ತಾನೆ ಎಂದು ನಂಬಲಾಗಿದೆ. ಈ ರೂಪವನ್ನು ರಥಸಪ್ತಮಿ ಪೂಜೆ ಮತ್ತು ಹಬ್ಬದ ಸಮಯದಲ್ಲಿ ಪೂಜಿಸಲಾಗುತ್ತದೆ. ರಥಸಪ್ತಮಿ ದಿನದಂದು ಸೂರ್ಯನ ಕಡೆಗೆ ಭೂಮಿಯ ಒಲವು ಎಂದು ಹೇಳಲಾಗುತ್ತದೆ. ಅಲ್ಲದೆ ಬೆಳಗ್ಗಿನ ಸೂರ್ಯನ ಎಳೆಬಿಸಿಲಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳಿವೆ ಎಂಬುದೂ ವೈಜ್ಙಾನಿಕವಾಗಿ ಸಾಭೀತಾಗಿದೆ. ದೇಹಕ್ಕೆ ದೇಹಕ್ಕೆ ಅತ್ಯಗ್ಯವಾದ ವಿಟಾಮಿನ್ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ. ಆದ್ದರಿಂದ ಸೂರ್ಯನನ್ನು ಪೂಜಿಸಲಾಗುತ್ತದೆ ಎಂದರು.
ಗೋಪಾಲಕೃಷ್ಣ ದೇಲಂಪಾಡಿ ಅವರು ಸೂರ್ಯನಮಸ್ಕಾರದ ಮಹತ್ವ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಸೂರ್ಯನಮಸ್ಕಾರ, ಆಸನ ಮತ್ತು ಪ್ರಾಣಾಯಮಗಳ ಮಿಶ್ರಣ, .ಸೂರ್ಯ ನಮಸ್ಕಾರದಿಂದ ಆಸನಗಳ ಪ್ರಯೋಜನಗಳು ಕೂಡಾ ಒದಗಿಬರುತ್ತದೆ. ಜ್ಞಾನಿಗಳು ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂದಿರುತ್ತಾರೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ ಎಂದು ಹೇಳಿದರು.
ಸೂರ್ಯನಿಗೆ ತಲೆಬಾಗಿ ನಮಸ್ಕಾರ ಮಾಡುವುದು ಆಗಿದೆ. ಸೂರ್ಯ ಈ ಗ್ರಹದ ಜೀವನ, ಆ ಶಕ್ತಿಯ ಮೂಲವಾಗಿದೆ. ಈ ಶಕ್ತಿ ಮೂಲ ಅಂದರೆ ಸೂರ್ಯನ ಚಕ್ರಗಳು, ದೈಹಿಕ ಆರೋಗ್ಯ, ಯೋಗಕ್ಷೇಮ, ಇತ್ಯಾದಿಗಳನ್ನು ನೋಡುತ್ತಾನೆ. ಸೂರ್ಯನಿಗೆ ಸೂರ್ಯ ನಮಸ್ಕಾರದ ಮೂಲಕ ವಂದನೆ ಮಾಡಿದಾಗ ಹೃದಯ, ಯಕೃತ್, ಕರುಳು, ಹೊಟ್ಟೆ, ಎದೆ, ಗಂಟಲು ಮತ್ತು ಕಾಲುಗಳ ಕಾರ್ಯಗಳನ್ನು ಸುಧಾರಿಸುತ್ತದೆ. ಹಾಗೂ ರಕ್ತ ಶುದ್ಧೀಕರಿಸುವ ಕೆಲಸವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡಲಾಯಿತು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ನೇತೃತ್ವದಲ್ಲಿ ಸೂರ್ಯನಮಸ್ಕಾರದ ಅಭ್ಯಾಸ ಜರುಗಿತು.
ದೇಲಂಪಾಡಿ ಯೋಗದ ಪ್ರತಿಷ್ಠಾನದ ವಿದ್ಯಾರ್ಥಿಗಳು ಹಾಗೂ ಹಲವು ಯೋಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆನ್‌ಲೈನ್ ಯೋಗ ಬಂಧುಗಳು ಸೇರಿ 175 ಕ್ಕೂ ಮಿಕ್ಕಿ ಯೋಗ ಬಂಧುಗಳು ಸೂರ್ಯನಮಸ್ಕರದಲ್ಲಿ ಭಾಗವಹಿಸಿದರು. ಭಾಗವಹಿಸಿದ ಯೋಗ ಬಂಧುಗಳಿಗೆ ಸರ್ಟಿಫೀಕೇಟ್ ನೀಡಲಾಗುತ್ತದೆ. ದೇಲಂಪಾಡಿ ಅವರ ಶಿಷ್ಯರು ಸಹಕರಿಸಿದರು.