
ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಕಾಮತ್
Monday, February 24, 2025
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 35, ಕಾರ್ಮಿಕ ಕಾಲೋನಿ ಶಕ್ತಿನಗರ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು
ಬಳಿಕ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳು ಈ ದೇಶದ ಭವಿಷ್ಯವಾಗಿರುವ ಮುಂದಿನ ಪೀಳಿಗೆಯನ್ನು ಉತ್ತಮ ಪ್ರಜೆಯನ್ನಾಗಿಸುವ ಮೊದಲ ಹಂತದ ಜ್ಞಾನ ದೇಗುಲಗಳು. ಇಲ್ಲಿ ಆಡಿ ಬೆಳೆದ ಕಂದಮ್ಮಗಳು ಮುಂದೆ ಈ ದೇಶದ ಭವಿಷ್ಯವನ್ನು ಬೆಳಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮನಪಾ ಸದಸ್ಯ ಕಿಶೋರ್ ಕೊಟ್ಟಾರಿಯವರು ವಹಿಸಿಕೊಂಡಿದ್ದು, ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ರವಿಚಂದ್ರ, ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ಹರೀಶ್ ರೈ, ವಾಸುದೇವ, ಸುನಿಲ್ ಕುಮಾರ್, ದೇವಿ ಪ್ರಸಾದ್, ರುಫಿನಾ ಟೀಚರ್, ಚಂಪಾ, ಭರತ್ ಕುಮಾರ್, ಹೆನ್ರಿ, ತೇಜಸ್, ಮಹೇಶ್, ರೂಪ, ಉಮೇಶ್ ಕುಲಾಲ್, ಯತೀಶ್, ನಿತಿನ್ ಕುಮಾರ್, ಶ್ರವಣ್, ದಿವಾಕರ್, ಸವಿತಾ ರೈ, ಮಾಧವ ಭಟ್ ಮೊದಲಾದವರು ಉಪಸ್ಥಿತರಿದ್ದರು