
ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಪ್ರಾಯೋಗಿಕವಲ್ಲ: ಬಿ.ಕೆ. ಇಮ್ತಿಯಾಜ್
Saturday, February 1, 2025
ಮಂಗಳೂರು: ಬೀದಿ ವ್ಯಾಪಾರ ವಲಯವು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕವಾಗಿರುವಾಗ ಬೀದಿ ವ್ಯಾಪಾರಿಗಳನ್ನು ಪೊಲೀಸ್ ಬಲ ಪ್ರಯೋಗಿಸಿ ತೆರವುಗೊಳಿಸುವ ತೀರ್ಮಾನ ಅಮಾನುಷವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಇದರ ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ವ್ಯಾಪಾರ ವಲಯದ ಎದುರಿನ ರಸ್ತೆಯಲ್ಲೇ ಬೀದಿ ವ್ಯಾಪಾರ ನಡೆಯುತ್ತಿರುವಾಗ ವಲಯದ ಒಳಗೆ ಗ್ರಾಹಕರು ಬರುವುದಿಲ್ಲ. ಗ್ರಾಹಕರು ಕಣ್ಣಿಗೆ ಕಂಡಲ್ಲಿ, ಕೈಗೆ ಸಿಗುವಲ್ಲಿ ಖರೀದಿಸುತ್ತಾರೆ ಹಾಗಾಗಿ ವಲಯದ ಒಳಗೆ ಗ್ರಾಹಕರು ಬಾರದೆ ನಷ್ಟ ಅನುಭವಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಹಣ್ಣು ತರಕಾರಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವು ಗೊಳಿಸುತ್ತಿರುವುದು ಪ್ರಾಯೋಗಿಕ ಕ್ರಮವಲ್ಲ ಸೆಂಟ್ರಲ್ ಮಾರ್ಕೆಟ್ ವಾರ್ಡ ಲ್ಲಿ ವ್ಯಾಪಾರ ವಲಯ ಆಗುವವರೆಗೆ ಸ್ಟೇಟ್ ಬ್ಯಾಂಕ್ ಮೀನು ಮಾರ್ಕೆಟ್ ಬಳಿ ವ್ಯಾಪಾರ ನಡೆಸಲು ಕಾಲವಕಾಶ ನೀಡಬೇಕೆಂದು ಬಿ.ಕೆ. ಇಮ್ತಿಯಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.