.jpeg)
ಕೇಂದ್ರದ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ- ಇದೊಂದು ಸಂಪೂರ್ಣ ರೈತ ವಿರೋಧಿ ಬಜೆಟ್: ಮಂಜುನಾಥ ಭಂಡಾರಿ
Saturday, February 1, 2025
ಮಂಗಳೂರು: ಕೇಂದ್ರದ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್. ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ರಾಜ್ಯದ ಜನರಿಗೆ ಬಿಜೆಪಿ ಸಂಸದರಿಂದ ಪ್ರಯೋಜನವಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕಕ್ಕೆ ಯಾವುದೇ ಯೋಜನೆಯನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಮೇಲಿದ್ದ ಜನರ ಭರವಸೆ ಹುಸಿಯಾಗಿದೆ. ದೇಶದ ಭವಿಷ್ಯ ದೃಷ್ಟಿಯಿಂದ ಇದು ನಿರಾಶದಾಯಕ ಬಜೆಟ್. ಇದು ದೇಶವನ್ನು ವಿನಾಶ ಮಾಡುವಂತ ಬಜೆಟ್ ಆಗಿದ್ದು, ಸಬ್ ಕಾ ಲಾಸ್ ಬಜೆಟ್ ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರತಿಕ್ರಿಯೆ ನೀಡಿದ್ದಾರೆ.