
ಬಡವರಿಗೆ, ಮಧ್ಯಮ ವರ್ಗದವರಿಗೆ ತೊಂದರೆ: ಬಿ. ಪ್ರವೀಣ್ ಚಂದ್ರರಾವ್
ಮಂಗಳೂರು: ದ.ಕ. ಜಿಲ್ಲೆಯ ಖಾಸಗಿ ಶಾಲೆ, ಹೋಟೆಲ್, ಲಾಡ್ಜ್, ಖಾಸಗಿ ಆಸ್ಪತ್ರೆ, ಸರಕಾರಿ ಕಚೇರಿ, ಪೊಲೀಸ್ ಇಲಾಖೆ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ. ಪ್ರವೀಣ್ ಚಂದ್ರರಾವ್ ಆರೋಪಿಸಿದರು.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಉದ್ದೇಶ ನೆಲ ಜಲ ಮತ್ತು ಸಂಸ್ಕೃತಿಯ ರಕ್ಷಣೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲಾ ಜನರ ರಕ್ಷಣೆ ನಮ್ಮ ಮೂಲ ಧೈಯ ಮತ್ತು ಉದ್ದೇಶ ಸ್ನೇಹಕ್ಕೂ ಸಿದ್ದ ಸಮರಕ್ಕೂ ಸಿದ್ದ ಎಂದರು.
ಮಂಗಳೂರಿನ ಖಾಸಾಗಿ ಆಸ್ಪತ್ರೆಗಳಲ್ಲಿ ಒಂದು ಚಿಕ್ಕ ಖಾಯಿಲೆಯ ಪರೀಕ್ಷೆಗಾಗಿ ಹೆಚ್ಚು ಹಣವನ್ನು ತೆಗೆದುಕೊಂಡು ಹಗಲು ದರೋಡೆ ಮಾಡುತ್ತಾರೆ. ಖಾಸಾಗಿ ಲಾಡ್ಜ್‌ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು ದೂರು ಕೊಟ್ಟರೂ ಸರಿಯಾದ ತನಿಖೆ ಮಾಡುವುದಿಲ್ಲ. ಖಾಸಾಗಿ ಶಾಲೆಗಳಲ್ಲಿ ವಿದ್ಯಾಭ್ಯಾಸವು ಒಂದು ಹಣ ಮಾಡುವ ದಂಧೆಯಾಗಿದೆ . ಪೊಲೀಸ್ ಇಲಾಖೆಯಲ್ಲಿ ದೂರು ಕೊಟ್ಟರೆ ಹಣ ಇದ್ದವರಿಗೆ ಒಂದು ನ್ಯಾಯ ಪಾಪದವರಿಗೆ ಒಂದು ನ್ಯಾಯ ಮಾಡುತ್ತಾರೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆಯಲ್ಲಿ ಅಂಗಡಿ ಪರವಾನಿಗೆ ಇಲ್ಲದೆ ವ್ಯಾಪಾರ ಮಾಡುವವರ ಬಗ್ಗೆ ದೂರು ಕೊಟ್ಟರೆ ಸರಿಯಾದ ನ್ಯಾಯ ಸಿಗುವುದಿಲ್ಲ. ಇದರ ಬಗ್ಗೆ ದೂರು ಕೊಟ್ಟವರನ್ನೇ ಸುಳ್ಳು ದೂರು ಹಾಕಿ ಜೈಲಿಗೆ ಹಾಕುತ್ತಾರೆ. ಇದರ ಬಗ್ಗೆ ಮಹಾ ನಗರ ಪಾಲಿಕೆ ಆಯುಕ್ತರು ಸರಿಯಾಗಿ ಸಮಗ್ರ ತನಿಖೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅವರ ಪರವಾನಿಗೆ ರದ್ದು ಮಾಡಬೇಕು. ಸರಕಾರಿ ಕಚೇರಿಗಳಲ್ಲಿ ಕೂಡಾ ಲಂಚ ಕೊಡದೇ ಯಾವುದೇ ಕೆಲಸಗಳು ತ್ವರಿತಗತಿ ಯಲ್ಲಿ ಮಾಡುವುದಿಲ್ಲ. ಇದರ ಬಗ್ಗೆ ಸರಕಾರ ಗಮನ ಕೊಡಬೇಕು ಆಪಾದಿಸಿದರು.
ಚಂದ್ರ ರಾವ್ ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮನೋಹರ, ವೇದಿಕೆಯ ಪ್ರಮುಖರಾದ ಸುರೇಶ್, ಪ್ರಕಾಶ್, ವೆಂಕಟೀಶ್ ಉಪಸ್ಥಿತರಿದ್ದರು.