ದೆಹಲಿ ಫಲಿತಾಂಶ-ಮೋದಿ ಪರ ಜನರ ಒಲವು: ಸತೀಶ್ ಕುಂಪಲ

ದೆಹಲಿ ಫಲಿತಾಂಶ-ಮೋದಿ ಪರ ಜನರ ಒಲವು: ಸತೀಶ್ ಕುಂಪಲ


ಮಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾರ ಭೃಷ್ಟಾಚಾರದ ವಿರುದ್ಧ ತೀರ್ಪು ನೀಡಿದ್ದಾರೆ. ಸ್ವಚ್ಛ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಆಪ್ ಸರ್ಕಾರದ ಸ್ವಜನ ಪಕ್ಷಪಾತ, ಸರ್ವಾಧಿಕಾರ, ಅಬಕಾರಿ ಹಗರಣಗಳಿಂದ ಜನರು ರೋಸಿ ಹೋಗುವಂತೆ ಆಡಳಿತ ನಡೆಸಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಜೈಲು ಪಾಲಾಗಿರುವುದು ಅದರ ಭೃಷ್ಟತೆಯ ಪ್ರಮಾಣವನ್ನು ತೋರಿಸಿದೆ.

27 ವರ್ಷಗಳ ಬಳಿಕ ಬಿ.ಜೆ.ಪಿ. ಮರಳಿ ಅಧಿಕಾರದ ಗದ್ದುಗೆ ಏರಿದೆ. ಮತದಾರ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಸ್ವಚ್ಛ ಜನಪರ, ಅಭಿವೃದ್ಧಿ ಪರ ಆಡಳಿತಕ್ಕೆ ಜೈ ಎಂದಿದ್ದಾರೆ. ದೆಹಲಿ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆಯನ್ನು ಜನರು ಮನಗಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article