
ಕರುಣಾಕರ ಬಳ್ಕೂರು ಅವರ ಎರಡನೇಯ ಕೃತಿ ‘ಬೆಳಕು’ ಬಿಡುಗಡೆ
ಮಂಗಳೂರು: ನಗರದ ಪುರಭವನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 10 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕರುಣಾಕರ ಬಳ್ಕೂರು ಅವರ ಎರಡನೇಯ ಕೃತಿ ‘ಬೆಳಕು’ ಕವನ ಸಂಕಲನವನ್ನು ಅರೆಹೊಳೆ ಪ್ರತಿಷ್ಠಾನದ ರೂವಾರಿ ಅರೆಹೊಳೆ ಸದಾಶಿವ ರಾವ್ ಅವರು ಬಿಡುಗಡೆಗೊಳಿಸಿದರು.
ಸ.ಪ.ಪೂ. ಕಾಲೇಜು ಸಿದ್ಧಕಟ್ಟೆ ಬಂಟ್ವಾಳ ತಾಲೂಕು ಇಲ್ಲಿನ ಕನ್ನಡ ಉಪನ್ಯಾಸಕ ಸಂಜಯ ಬಿಳಿಕಿಕೊಪ್ಪ ಅವರು ಬೆಳಕು ಕವನ ಸಂಕಲನದ ಪುಸ್ತಕ ಪರಿಚಯ ಮಾಡಿದರು.
ವೇದಿಕೆಯಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಶಶಿರಾಜ್ ರಾವ್ ಕಾವೂರ್, ಬೆಳಕು ಸಂಕಲನದ ಲೇಖಕ, ಕವಿ ಕರುಣಾಕರ ಬಳ್ಕೂರು, ಶಿಲ್ಪ ಕೆ. ಬಳ್ಕೂರು, ಅರ್ಥವ ಕೆ. ಬಳ್ಕೂರು, ಅದ್ವೈತ್ ಕೆ. ಬಳ್ಕೂರು ಉಪಸ್ಥಿತರಿದ್ಧರು, ಕೆನರಾ ಪ.ಪೂ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಘು ಇಡ್ಕಿದು ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಪುಷ್ಪಲತಾ ಕಾರಂತ್ ಅವರು ಕೆಲವು ಕವನಗಳನ್ನು ಹಾಡಿದರು.
ಈ ಕವನ ಸಂಕಲನವು ಅರ್ಥಪೂರ್ಣವಾಗಿದೆ, ಕಾರಣ ತಂದೆ ತಾಯಿ ಅವರು ಮಕ್ಕಳನ್ನು ಬೆಳಕಾಗಿ ಅವರನ್ನು ಮುನ್ನಡೆಸಬೇಕು ಎಂಬ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸುತ್ತದ ಎಂದು ಅರೆಹೊಳೆ ಸದಾಶಿವ ರಾವ್ ಹೇಳಿದರು.
ಬೆಳಕು ಇರುವಂತದ್ದೇ ಆದರೆ ಆ ಬೆಳಕು ಕೆಲವರಿಗೆ ಅದು ಕತ್ತಲಗಬಹುದು. ಬೆಳಕನ್ನು ಗುರುತಿಸಲಾಗದ ಸ್ಥಿತಿಯಲ್ಲಿ ಇರುತ್ತವೆ ಆ ಸಂದರ್ಭದಲ್ಲಿ ಬಳ್ಕೂರು ಅವರು ಬರೆದ ಕವನಗಳು ಕಾವ್ಯದ ಮೂಲಕ ಅರ್ಥೈಸಿಕೊಳ್ಳಬಹುದು ಎನ್ನುವುದು ಇಲ್ಲಿನ ಕವನಗಳ ಮೂಲಕ ತಿಳಿಯಪಡಿಸಿದ್ದಾರೆ. ಸಹೃದಯದಲ್ಲಿ ಇವರ ಕವನಗಳು ಬೆಳಕು ಮೂಡಿಸಲಿ ಎಂದು ಶುಭ ಹಾರೈಸುತ್ತೇನೆ. ಸಮಾಜದ ನಡುವೆ ಇರುವ ವಸ್ತುಗಳನ್ನು ಇಲ್ಲಿನ ಕವನಗಳಲ್ಲಿ ಬಳಸಿಕೊಳ್ಳುತ್ತ ಕೆಲವೊಂದು ವಿರೋಧ ಭಾಸವನ್ನು ಗುರುತಿಸಿದ್ದಾರೆ , ಸಮಕಾಲೀನತೆ, ಪ್ರಕೃತಿ, ರಮ್ಯತೆ, ವಿಶ್ವ ಸಂದೇಶ ಹೀಗೆ ಹಲವು ಅಂಶಗಳನ್ನು ಸರಳವಾಗಿ ತಮ್ಮ ಕವನಗಳಲ್ಲಿ ಗುರುತಿಸಿದ್ದಾರೆ .ಲೇಖಕರಾದ ಡಾ.ಬಿ ಎ ವಿವೇಕ್ ರೈ ಅವರು ಇದಕ್ಕೆ ಮುನ್ನುಡಿ ಬರೆದಿರುವುದು ವಿಶೇಷ ಎಂದು ಕನ್ನಡ ಉಪನ್ಯಾಸಕರಾದ ಸಂಜಯ ಬಿಳಿಕಿಕೊಪ್ಪ ಹೇಳಿದರು.