.jpeg)
ಬಿಜೆಪಿಯವರು ಸ್ವಂತ ದುಡ್ಡಲ್ಲಿ ಕಟ್ಟಿದ್ದಾರಾ?
Saturday, February 15, 2025
ಮಂಗಳೂರು: ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡದೆ ಬಿಜೆಪಿ ನಾಯಕರು ಉದ್ಘಾಟನೆ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ದಿನೇಶ್ ಗುಂಡೂರಾವ್, ಶಾಸಕ ವೇದವ್ಯಾಸ್ ಕಾಮತ್ ಮಂಗಳೂರಿನ ಪಾಳೆಗಾರನಾ? ಯಾವುದೇ ಕಾಮಗಾರಿಗಳ ಉದ್ಘಾಟನೆ ಶಿಷ್ಟಾಚಾರದ ಪ್ರಕಾರ ಆಗಬೇಕು.
ಅರೋಗ್ಯ ಇಲಾಖೆ ನನ್ನ ಇಲಾಖೆ, ನನಗೆ ಅದರ ಜವಾಬ್ದಾರಿ ಇದೆ. ಬಿಜೆಪಿಯವರು ಉದ್ಘಾಟನೆ ಮಾಡಲು ಸ್ವಂತ ದುಡ್ಡು ಹಾಕಿ ಕಟ್ಟಿದ್ದಾರಾ? ಅವರ ಭೂಮಿಯಲ್ಲಿ ಮಾಡಿದ್ದಾರಾ? ಇದು ಸರ್ಕಾರದ ಹಣ, ಆಸ್ತಿ. ಉದ್ಘಾಟನೆ ವಿಚಾರದಲ್ಲಿ ಅಧಿಕಾರಿಗಳ ತಪ್ಪಿರಬಹುದು, ಆದರೆ ಬಿಜೆಪಿಯವರಿಗೆ ಗೊತ್ತಿಲ್ವಾ? ನಾನು ವೇದವ್ಯಾಸ ಕಾಮತ್ ಅವರ ಕ್ಷೇತ್ರದಲ್ಲಿ ಯಾರನ್ನೂ ಕರೆಯದೆ ಉದ್ಘಾಟನೆ ಮಾಡಿ ಹೋಗ್ಲಾ? ಪ್ರಾಥಮಿಕ ಆರೋಗ್ಯ ಕೇಂದ್ರ ಎರಡು ದಿನ ಬಂದ್ ಆಗುವ ವಾತಾವರಣ ನಿರ್ಮಾಣ ಮಾಡಿದ್ದು ಬಿಜೆಪಿಯ ಶಾಸಕರು ಎಂದು ಹರಿಹಾಯ್ದರು.