
‘ಸುರ್ ತಾರ್’: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
Sunday, February 23, 2025
ಮಂಗಳೂರು: ಭಾರತ ಮತ್ತು ಫಿಲಿಪೈನ್ಸ್‌ನ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳ ಆಚರಣೆಯ ಅಂಗವಾಗಿ ಮ್ಯೂಸಿಕ್ ಇನ್ ಮನಿಲಾ ಮತ್ತು ಭಾರತ ಸರಕಾರದ ವಿದೇಶಾಂಗ ಸಚಿವಾಲಯವು ಜಂಟಿಯಾಗಿ ಫಿಲಿಪೈನ್‌ನ ಮನಿಲಾದಲ್ಲಿ ಆಯೋಜಿಸಿದ್ದ ‘ಸುರ್ ತಾರ್’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮಂಗಳೂರಿನ ಯುವ ಕಲಾವಿದ ಅಂಕುಶ್ ಎನ್. ನಾಯಕ್ ಅವರಿಂದ ಸಿತಾರ್ ವಾದನ ನಡೆಯಿತು.
ಇವರಿಗೆ ತಬ್ಲಾದಲ್ಲಿ ಯಶವಂತ ವೈಷ್ಣವ್ ಸಾಥ್ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ ಹರ್ಷ ಕೆ. ಜೈನ್ ಮತ್ತು ಅವರ ಪತ್ನಿ ವಂದನಾ ಜೈನ್ ಚಾಲನೆ ನೀಡಿದರು.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿಕಾಸ್ ಶೀಲ್, ಜಸ್ಟಿನ್ ಡಿಯೋಕ್ನೋ-ಸಿಕಾಟ್, ಎಡಿಬಿ ಸೆಕ್ಟರ್ ಗ್ರೂಪ್‌ನ ಮಹಾನಿರ್ದೇಶಕ ರಮೇಶ್ ಸುಬ್ರಮಣಿಯಂ, ಎಡಿಬಿಯ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರ ಮತ್ತು ಹಿರಿಯ ಐಎಎಸ್ ಅಧಿಕಾರಿ ಪೊನ್ನುರಾಜ್ ವಿ. ಉಪಸ್ಥಿತರಿದ್ದರು.