ಡೈರಿ ಎದುರು ಏಕಾಂಕಿಯಾಗಿ ಧರಣಿಗೆ ಕುಳಿತ ನಿರ್ದೇಶಕರು

ಡೈರಿ ಎದುರು ಏಕಾಂಕಿಯಾಗಿ ಧರಣಿಗೆ ಕುಳಿತ ನಿರ್ದೇಶಕರು


ಮೂಡುಬಿದಿರೆ: ದನ ಸಾಕದೆ ಡೈರಿಗೆ ಹಾಲು ಹಾಕಿ ಕಳೆದ 30 ವಷ೯ಗಳಿಂದ ಅಧ್ಯಕ್ಷರಾಗುತ್ತಿರುವವರ ಖಂಡಿಸಿ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ನಿದೇ೯ಶಕರಿಗೆ ನೋಟೀಸ್ ನೀಡದಿರುವ ಸಿಬಂದಿ ವಿರುದ್ಧ ಧಿಕ್ಕಾರ ಹಾಕಿ ನಿದೇ೯ಶಕರೋವ೯ರು ಡೈರಿಯ ಮುಂಭಾಗ ಧರಣಿ ಕುಳಿತ ಪ್ರಸಂಗ ಸೋಮವಾರ ಬೆಳಗ್ಗೆ ಬನ್ನಡ್ಕದಲ್ಲಿ ನಡೆದಿದೆ.

ಪಡುಮಾನಾ೯ಡು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇಲ್ಲಿಗೆ ಕಳೆದ  20 ವಷ೯ಗಳಿಂದ ಹಾಲು ಹಾಕುತ್ತಾ ಬರುತ್ತಿರುವ ನಮಿರಾಜ್ ಪಿ. ಬಲ್ಲಾಳ್ ಧರಣಿ ಕುಳಿತ ನಿದೇ೯ಶಕ.


ಜನವರಿ 14ರಂದು ಪಡುಮಾನಾ೯ಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ  ನಿದೇ೯ಶಕರ ಚುನಾವಣೆ ನಡೆದಿತ್ತು. 18 ತಾರೀಖಿಗೆ ತನ್ನನ್ನು ಸೇರಿಸಿ 11 ನಿದೇ೯ಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 23ನೇ ತಾರೀಖಿಗೆ ಚುನಾವಣಾಧಿಕಾರಿ ತನಗೆ ಕರೆ ಮಾಡಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ 24 ತಾರೀಖಿಗೆ ಕಾಯ೯ದಶಿ೯ ಅವರು ಲೆಜ್ಜರ್ ಗೆ ಸಹಿ ಪಡೆದುಕೊಂಡು ಪ್ರಮಾಣಪತ್ರ ನೀಡಿರುತ್ತಾರೆ. ಆದರೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಗೆ ತನಗೆ ನೋಟೀಸ್ ನೀಡದೆ ದಯಾನಂದ ಪೈ ಮತ್ತು ದಯಾನಂದ ಶೆಟ್ಟಿ ಅವರನ್ನು ಅಧ್ಯಕ್ಷರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದ ನಮಿರಾಜ್ ಬಲ್ಲಾಳ್ ಅವರು ಹಾಗಾದರೆ ಪ್ರಾಮಾಣಿಕವಾಗಿ ಡೈರಿಗೆ ಹಾಲು ಹಾಕುವವರಿಗೆ ಅಧ್ಯಕ್ಷರು, ಉಪಾಧ್ಯಕ್ಷರಾಗುವ ಅಹ೯ತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಅಧ್ಯಕ್ಷರಾಗಿರುವ ದಯಾನಂದ ಪೈ ಅವರು ದನ ಸಾಕದಿದ್ದರೂ ಹಾಕುತ್ತಿದ್ದಾರೆ ಅವರು ಪ್ಯಾಕೆಟ್ ಹಾಲನ್ನು ಡೈರಿಗೆ ಹಾಕುತ್ತಿರಬಹುದೇ ಎಂದು ಸಂದೇಹ ವ್ಯಕ್ತ ಪಡಿಸಿದರು.

ನಮಿರಾಜ್ ಅವರು ಈ ಹಿಂದೆ  ದನಗಳಿಗೆ ನೀಡುವ ಹಿಂಡಿಯ ಬಗ್ಗೆ ಆರೋಪ ಮಾಡಿ ಒಬ್ಬಂಟಿಯಾಗಿ ಧರಣಿ ಕುಳಿತು ಗಮನ ಸೆಳಿದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article