ಮೂಡುಬಿದಿರೆ ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ

ಮೂಡುಬಿದಿರೆ ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ


ಮೂಡುಬಿದಿರೆ: ಸಂಪೂರ್ಣ ಶಿಲಾದೇಗುಲವಾಗಿ ಪುನಃ ನಿರ್ಮಾಣ  ಗೊಂಡಿರುವ ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಲಾಡಿಯಲ್ಲಿರುವ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಯಾಗಿ ರವಿವಾರ ಬೆಳಗ್ಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.

ಆಳ್ವಾಸ್‌ ಸಮೂಹ ಸಂಸ್ಥೆಗಳ ಟ್ರಸ್ಟಿ ವಿವೇಕ ಟ್ರಸ್ಟಿ ಅವರು ದೇಗು ಲದ ವ್ಯವಸ್ಥಾಪನ ಸಮಿತಿ ಮತ್ತು ಜೀರ್ಣೋದ್ಧಾರ  ಸಮಿತಿ ಅಧ್ಯಕ್ಷ ಅನಂತ ಕೃಷ್ಣರಾವ್ ಸಹಿತ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಸ್ವತಃ ತಾನೂ ಎರಡೂವರೆ ಕಿ.ಮೀ. ಉದ್ದಕ್ಕೂ ಸಾಗಿ ಬಂದು ವ್ಯವಸ್ಥೆಗಳಲ್ಲಿ ಸಹಕರಿಸಿದರು.


ಸುಮಾರು 2ರಷ್ಟು ವಾಹನಗಳಲ್ಲಿ ಹಸುರು ಹೊರೆ ಕಾಣಿಕೆ ಹರಿದುಬಂದಿದ್ದು ಸರ್ವಮತಧರ್ಮಗಳ ಮಂದಿ ತಮ್ಮಿಂದಾದ ಕೊಡುಗೆ ನೀಡಿ ಸಾಮರಸ್ಯ ಸಾರಿದರು. ಮಂಗಲ ವಾದ್ಯ, ತಟ್ಟಿರಾಯ, ಕೀಲುಕುದುರೆ, ಬ್ಯಾಂಡ್ ಮೊದಲಾದ

ಆಕರ್ಷಣೆಗಳೊಂದಿಗೆ ಹಲವು ಕುಣಿತ ಭಜನೆ ತಂಡಗಳು, ಸಾವಿರಾರು ಸಂಖ್ಯೆ ಯಲ್ಲಿ ಕಲಶ ಹಿಡಿದ ವನಿತೆಯರು ಸಂಭ್ರಮದಿಂದ ಹೆಜ್ಜೆ ಹಾಕಿದರು.


ಪ್ರ. ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಕೋಶಾಧಿಕಾರಿ ಸದಾನಂದ ಪೂಜಾರಿ, ಉಪಾಧ್ಯಕ್ಷ ಗಣೇಶರಾವ್, ಪವಿತ್ರವಾಣಿ ರಾಘವೇಂದ್ರ ರಾವ್, ಎಚ್. ಸುರೇಶ ಪ್ರಭು, ಪ್ರಸಾದ್ ಕುಮಾರ್ ಸಹಿತ ಪುರಸಭೆ ಸದಸ್ಯರು, ದಾನಿಗಳು, ಭಕ್ತರು ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಲೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article