ಮಾಚ್೯ನಿಂದ ಜೂನ್ ವರೆಗೆ ಗೃಹೇತರ ನೀರಿನ ಬಳಕೆ ಸಂಪಕ೯ಕ್ಕೆ ಅನುಮತಿ ಸ್ಥಗಿತ: ಪುರಸಭೆ ಪ್ರಕಟಣೆ

ಮಾಚ್೯ನಿಂದ ಜೂನ್ ವರೆಗೆ ಗೃಹೇತರ ನೀರಿನ ಬಳಕೆ ಸಂಪಕ೯ಕ್ಕೆ ಅನುಮತಿ ಸ್ಥಗಿತ: ಪುರಸಭೆ ಪ್ರಕಟಣೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಪುಚ್ಚೆಮೊಗರು ಕಿಂಡಿ ಅಣೆಕಟ್ಟಿನಲ್ಲಿ ಹಾಗೂ ಪುರಸಭಾ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವುಂಟಾಗಿರುವುದರಿಂದ ಗೃಹೇತರ ಬಳಕೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನೀರಿನ ಸಂಪರ್ಕದ ಅನುಮತಿಯನ್ನು ಮಾರ್ಚ್‌ನಿಂದ ಜೂನ್ 2025ರವರೆಗೆ ಸ್ಥಗಿತಗೊಳಿಸಲಾಗಿದೆ. 

ನಾಗರಿಕರು ನೀರನ್ನು ವಾಹನ ತೊಳೆಯಲು, ಗಿಡ ಮರಗಳಿಗೆ ವ್ಯಯ ಮಾಡದೆ ಮಿತವಾಗಿ ಬಳಸತಕ್ಕದ್ದು. ಬಳಸುವುದು ಕಂಡು ಬಂದಲ್ಲಿ ನಳ್ಳಿ ನೀರಿನ ಜೋಡಣೆಯನ್ನು ರದ್ದುಪಡಿಸಲಾಗುವುದು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಬೇಡಿಕೆಯು ಹೆಚ್ಚಾಗಿರುವುದರಿಂದ ದಿನಂಪ್ರತಿ ನೀರನ್ನು ಸರಬರಾಜು ಮಾಡಲು ಅಸಾಧ್ಯವಾಗಿದ್ದು, ಏ.1 ರಿಂದ ನಗರಕ್ಕೆ 2 ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ನಾಗರಿಕರು ಸಹಕರಿಸಿ ನೀರನ್ನು ವ್ಯಯ ಮಾಡದೆ ಮಿತವಾಗಿ ಬಳಸಿ ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article