ಅಧಿಕಾರಿಗಳು ಗೈರು: ಶಿತಾ೯ಡಿ ಗ್ರಾಮಸಭೆ ರದ್ದು

ಅಧಿಕಾರಿಗಳು ಗೈರು: ಶಿತಾ೯ಡಿ ಗ್ರಾಮಸಭೆ ರದ್ದು


ಮೂಡುಬಿದಿರೆ: ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಬೇಕಾಗಿದ್ದ ವಿವಿಧ ಇಲಾಖೆಯ ಹೆಚ್ಚಿನ ಅಧಿಕಾರಿಗಳು ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ  ಶಿರ್ತಾಡಿ ಗ್ರಾಮ ಸಭೆಯು ಬುಧವಾರ ರದ್ದುಗೊಂಡಿದೆ.

ಶಿತಾ೯ಡಿ ಗ್ರಾ.ಪಂಚಾಯತ್‌ನ ದ್ವಿತೀಯ ಹಂತದ ಗ್ರಾಮಸಭೆಯನ್ನು ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿ’ಸೋಜಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಸುವುದೆಂದು  ನಿಗದಿಯಾಗಿತ್ತು.


ಈ ಗ್ರಾಮಸಭೆಗೆ ಆರೋಗ್ಯ, ಅರಣ್ಯ, ಮೆಸ್ಕಾಂ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದು ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರ ಅಸಮಧಾನಕ್ಕೆ ಕಾರಣವಾಯಿತು. ಅಧಿಕಾರಿಗಳು ಬರದಿದ್ದರೆ ಸಭೆ ನಡೆಸುವುದು ಬೇಡ ಎಂದು ಗ್ರಾಮಸ್ಥರು ಹೇಳಿದರು.

ಈ ಬಗ್ಗೆ ಮಾತನಾಡಿದ ಅಧ್ಯಕ್ಷರು, ಎಲ್ಲಾ ಅಧಿಕಾರಿಗಳಿಗೆ ಮುಂಚಿತವಾಗಿ ಸಭೆಯ ನೋಟಿಸ್ ನೀಡಿ ಆಹ್ವಾನಿಸಲಾಗಿದೆ, ಮೊಬೈಲ್‌ನಲ್ಲಿ ಕರೆ ಮಾಡಿಯು ತಿಳಿಸಲಾಗಿದೆ. ಆದರೂ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದ ಅವರು ಕೊನೆಗೆ ಸಭೆಯನ್ನು ರದ್ದುಗೊಳಿಸುವ ತೀಮಾ೯ನವನ್ನು  ಕೈಗೊಂಡರು. 


ಮುಂದಿನ 15 ದಿನಗಳೊಳಗೆ ಪ್ರತ್ಯೇಕ ಸಭೆ ಕರೆದು ಅಧಿಕಾರಿಗಳನ್ನು ಆಹ್ವಾನಿಸುವುದೆಂದು ನಿರ್ಣಯಿಸಲಾಯಿತು.

ಬೆಳುವಾಯಿ ಗ್ರಾಮ ಸಭೆಯೂ ರದ್ದು: 


ಹೆಚ್ಚಿನ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸೋಮವಾರ ನಡೆಯಬೇಕಾಗಿದ್ದ ಬೆಳುವಾಯಿ ಗ್ರಾಮ ಸಭೆ ಕೂಡ ರದ್ದುಗೊಂಡಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article