ಮಣಿಪಾಲದಲ್ಲಿ ಶ್ರೀ ಮಹಾವೀರ ಕಾಲೇಜು ವಿದ್ಯರ‍್ಥಿಗಳಿಗೆ ‘ಕಾಪೋ೯ರೇಟ್ ಓರಿಯೆಂಟೇಶನ್ ದಿನ’

ಮಣಿಪಾಲದಲ್ಲಿ ಶ್ರೀ ಮಹಾವೀರ ಕಾಲೇಜು ವಿದ್ಯರ‍್ಥಿಗಳಿಗೆ ‘ಕಾಪೋ೯ರೇಟ್ ಓರಿಯೆಂಟೇಶನ್ ದಿನ’

ಯುವ ಜನತೆಯೇ ದೇಶದ ನಿಜವಾದ ಸಂಪತ್ತು: ಡಾ. ಹೆಚ್.ಎಸ್. ಬಲ್ಲಾಳ್ 


ಮೂಡುಬಿದಿರೆ: ಇಂದಿನ ಯುವ ಜನಾಂಗ ನಾಳೆಯ ನಾಯಕರು. ಯುವ ಜನತೆಯೇ ದೇಶದ ನಿಜವಾದ ಸಂಪತ್ತು. ಅವರ ವಿದ್ಯಾಹ೯ತೆಯ ಆಧಾರದ ಮೇಲೆ ಅವರಿಗೆ ಉದ್ಯೋಗ ದೊರಕಬೇಕು. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳ ನಡುವಿನ ಅಂತರವನ್ನು ಹೋಗಲಾಡಿಸಲು ಇಂತಹ ಕಾರ‍್ಯಾಗಾರ ಸಹಕಾರಿಯಾಗಲಿದೆ ಎಂದು ಮಾಹೆ ಮಣಿಪಾಲದ ಉಪ ಕುಲಪತಿ ಡಾ. ಹೆಚ್.ಎಸ್. ಬಲ್ಲಾಳ್ ಹೇಳಿದರು.

ಅವರು ಮಾಹೆ, ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಹಾಗೂ ಮಹಾವೀರ ಕಾಲೇಜು ಹಳೆ ವಿದ್ಯಾಥಿ೯ ಸಂಘ ಸಹಯೋಗದಲ್ಲಿ ಮಣಿಪಾಲದ ಶಾರದಾ ಸಭಾಂಗಣದಲ್ಲಿ ಮಹಾವೀರ ಕಾಲೇಜು ಅಂತಿಮ ಪದವಿ ವಿದ್ಯಾಥಿ೯ಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕಾಪೋ೯ರೇಟ್ ಓರಿಯೆಂಟೇಶನ್ ದಿನ’ ಮಾಹಿತಿ ಕಾಯಾ೯ಗಾರವನ್ನು ಉದ್ಘಾಟಿಸಿ ಮಾತನಾಡಿದರು. 


ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲದ ಕಾಯ೯ದಶಿ೯ ವರದರಾಯ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ‘ಔದ್ಯೋಗಿಕ ಕ್ಷೇತ್ರದಲ್ಲಿ ಹಲವಾರು ಸವಾಲುಗಳು ಇರುತ್ತವೆ. ಇವನ್ನೆಲ್ಲ ಎದುರಿಸಲು ವಿದ್ಯಾಥಿ೯ಗಳಿಗೆ ಸಹಕಾರಿಯಾಗುವ ಕಾಯಾ೯ಗಾರ ಇದಾಗಿದ್ದು ಎಲ್ಲಾ ವಿದ್ಯಾಥಿ೯ಗಳು ಅವರ ಕೌಶಲ್ಯ ವೃದ್ಧಿಗಾಗಿ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. 

ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಇಂದಿನ ಸ್ಪಧಾ೯ತ್ಮಕ ಯುಗದಲ್ಲಿ ಕಾಣಬರುವ ಸಮಸ್ಯೆಗಳನ್ನು ಎದುರಿಸಲು ವಿದ್ಯಾಥಿ೯ಗಳಲ್ಲಿ ಪ್ರತಿಭೆ ಇರಬೇಕು. ಎಲ್ಲಾ ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾಥಿ೯ ಸಂಜಯ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ, ವಿದ್ಯಾಥಿ೯ ಕ್ಷೇಮಪಾಲ ನಾಧಿಕಾರಿ ಪ್ರೊ. ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾಥಿ೯ಗಳಾದ ರೋಹಿಸ್ಟನ್ ಪಿಂಟೋ ಸ್ವಾಗತಿಸಿದರು. ಶೃತಿ ಪೇರಿ ಕಾಯ೯ಕ್ರಮ ನಿರೂಪಿಸಿ, ರಮ್ಯಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article