
ಆಕ್ಟಿವಾ-ಕಾರು ಢಿಕ್ಕಿ: ಮಾಜಿ ಗ್ರಾಪಂ ಸದಸ್ಯ ಮೃತ
Monday, February 24, 2025
ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ನಡೆದ ಢಿಕ್ಕಿಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಪುತ್ತೂರಿನಲ್ಲಿ ನಡೆದಿದೆ.
ಕಬಕದಲ್ಲಿ ಈ ಅವಘಡ ನಡೆದಿದ್ದು, ಆಕ್ಟಿವಾ ಸವಾರ ಇಡ್ಕಿದು ಗ್ರಾ.ಪಂ. ಮಾಜಿ ಸದಸ್ಯ ಕುಂಡಡ್ಕ ಕಂಪ ನಿವಾಸಿ ಜನಾರ್ಧನ (40) ಮೃತಪಟ್ಟಿದ್ದಾರೆ.
ಕಬಕದಿಂದ ವಿದ್ಯಾಪುರ ಎಂಬಲ್ಲಿಗೆ ತೆರಳುತ್ತಿದ್ದ ಆಕ್ಟಿವಾ ಹಾಗೂ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಢಿಕ್ಕಿ ಸಂಭವಿಸಿತ್ತು. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.