
ಬೈಕ್ ಮತ್ತು ರಿಕ್ಷಾ ಅಪಘಾತ: ಬೈಕ್ ಸವಾರ ಮೃತ
Wednesday, February 5, 2025
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಫೆ.4ರಂದು ರಾತ್ರಿ ಬೈಕ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ಕೆಮ್ಮಿಂಜೆ ಬೈಲು ದಿ. ಪುರುಷೋತ್ತಮ ಎಂಬವರ ಪುತ್ರ ಚೇತನ್(46) ಅವರು ಮೃತಪಟ್ಟವರು. ಘಟನೆಯಿಂದ ಬೈಕ್‌ನಲ್ಲಿ ಸಹಸವಾರ ಮನೀಷ್(10) ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ರಿಕ್ಷಾ ಚಾಲಕ ಮಹಮ್ಮದ್ ತೌಸಿಕ್ ಅವರು ಗಾಯಗೊಂಡಿದ್ದಾರೆ. ಚೇತನ್ ಅವರು ಖಾಸಗಿ ವಿಡಿಯೋ ಗ್ರಾಫರ್ ಕಾರ್ಯನಿರ್ವಹಿಸುತ್ತಿದ್ದು, ಫೆ.೪ರಂದು ಅವರು ಮತಾವು ಅಣ್ಣನ ಮನೆಗೆ ಹೋಗಿ ಅಲ್ಲಿಂದ ಅವರ ಮಗಳ ಮಗ ಮನೀಷ್ ಜೊತೆ ಪೋಳ್ಯ ಜಾತ್ರೆಗೆ ಬಂದು ಮನೆಗೆ ವಾಪಾಸು ಹೋಗುತ್ತಿದ್ದ ಸಂದರ್ಭ ಎದುರು ದಿಕ್ಕಿನಿಂದ ಬಂದ ಆಟೋ ರಿಕ್ಷಾ ಬೈಕ್‌ಗೆ ಢಿಕ್ಕಿಯಾಗಿದೆ.
ಮೃತರು ಇಬ್ಬರು ಅಣ್ಣಂದಿರು ಮತ್ತು ಅಕ್ಕನನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಬಂದು ಮಾಹಿತಿ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.