
ಕಟ್ಟಿಂಗೇರಿಯಲ್ಲಿ ದುಷ್ಕರ್ಮಿಗಳಿಂದ ಶಿಲುಬೆ ದ್ವಂಸ: ಪ್ರಕರಣ ದಾಖಲು
Saturday, February 22, 2025
ಶಿರ್ವ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬೆಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ದುಷ್ಕರ್ಮಿಗಳು ಕೆಡವಿ ಧ್ವಂಸ ಮಾಡಿದ ಘಟನೆ ಫೆ.19ರಂದು ಸಂಜೆ ನಡೆದಿದೆ.
ಕ್ರೈಸ್ತ ಸಮುದಾಯದ ಹಾಗೂ ಕುಟುಂಬದ ಪೂಜಾ ಸ್ಥಳವಾಗಿದ್ದು ಧಾರ್ಮಿಕ ಪವಿತ್ರತೆಗೆ ಒಳಗೊಂಡಿದೆ. ಸದ್ರಿ ಕೃತ್ಯದಿಂದ ತಮಗೆ ಅಘಾತವಾಗಿದ್ದು, ತಮ್ಮ ಮತಕ್ಕೆ ಅವಮಾನವಾಗಿದೆ.
ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರಾದ ಪ್ಲಾಲೀವನ್ ಎಂಬವರು ಫೆ.21 ರಂದು ಶಿರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿರ್ವ ಪೋಲಿಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ.
ಈ ಬಗ್ಗೆ ಉಡುಪಿ ಉಡುಪಿ ಎಸ್.ಪಿ. ಡಾ. ಅರುಣ್ ಪ್ರತಿಕ್ರಿಯಿಸಿ ಶಿರ್ವ ಠಾಣಾ ವ್ಯಾಪ್ತಿಯ ಕಟ್ಟಿಂಗೇರಿಯ ಪಟ್ಟಾ ಜಾಗದಲ್ಲಿ ನಿರ್ಮಿಸಿದ ಶಿಲುಬೆ ಬ್ರೇಕ್ ಮಾಡಿ ಹೋಗಿರುವುದು. ಅದು ಎತ್ತರದ ಗುಡ್ಡೆಯ ಮೇಲಿದ್ದು, ಒಂದು ಕಿ.ಮೀ. ಕೆಳಗಡೆ ಮಾತ್ರ ಮನೆಗಳಿರುವುದು. 15-20 ದಿನಗಳ ಹಿಂದೆ ಚೆನ್ನಾಗಿರುವುದನ್ನು ಕಂಡಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಸ್ಥಳೀಯವಾಗಿ ಮಾಹಿತಿ ಪಡೆದು ಅಪರಾಧಿಗಳನ್ನು ಪತ್ತೆ ಹಚ್ಚಲು ಪ್ರಯತ್ನಸಲಾಗುವುದು ಎಂದಿದ್ದಾರೆ.