
ಎಟಿಎಂ ಕಳವು ಯತ್ನಿಸಿದವರ ಬಂಧನ
Friday, February 28, 2025
ಉಡುಪಿ: ನಗರದ ಹೊರ ವಲಯದ ಉದ್ಯಾವರ ಕೆನರಾ ಬ್ಯಾಂಕಿನ ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಗಳಿಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಜನಾಡಿಯ ಅಬೂಬಕ್ಕರ್ ಸಿದ್ದಿಕ್ (24) ಮತ್ತು ಪಡೀಲ್‌ನ ಮೊಹಮ್ಮದ್ ಯಾಸೀನ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ಫೆ.12ರಂದು ಉದ್ಯಾವರದಲ್ಲಿ ಬ್ಯಾಂಕಿನ ಎಟಿಎಮ್‌ನ ಹಣ ದೋಚಲು ವಿಫಲ ಯತ್ನ ನಡೆಸಿದ್ದರು. ಆರೋಪಿಗಳ ಚಲನವಲನದ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಕಾಪು ಪೊಲೀಸರು ಇಬ್ಬರನ್ನು ಮಂಗಳೂರು ಬಂದರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕಿಯಾದ ಜಯಶ್ರೀ ಎಸ್. ಮಾನೆ, ಪಡುಬಿದ್ರಿ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಟಿ. ನಾಯ್ಕ್, ಕಾಪು ಠಾಣೆಯ ಪಿಎಸ್‌ಐ ರಮೇಶ್ ನಾಯ್ಕ್ ಹಾಗೂ ಕಾಪು ಠಾಣೆ ಸಿಬ್ಬಂದಿ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎಎಸ್‌ಐ ರಾಜೇಶ್, ಸಿಬ್ಬಂದಿಗಳಾದ ಸಂದೇಶ, ಶಿರ್ವ ಠಾಣೆ ಸಿಬ್ಬಂದಿ ಸಿದ್ದರಾಯ, ಜೀವನ್ ತಂಡ ಭಾಗಿಯಾಗಿದ್ದರು.