
ಪ್ರಾರ್ಥನೆ ಮತ್ತು ಮನಪರಿವರ್ತನೆಯಿಂದ ಮದ್ಯವರ್ಜನೆಗೆ ಸಹಕಾರಿ: ಡಾ. ಹೆಗ್ಗಡೆ
Tuesday, February 11, 2025
ಉಜಿರೆ: ಪ್ರಾರ್ಥನೆ ಮತ್ತು ಮನಪರಿವರ್ತನೆಯಿಂದ ಮದ್ಯವರ್ಜನೆಗೆ ಸಹಕಾರಿಯಾಗಲಿದೆ. ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ತಮಗೆ ದೊರಕುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಇಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 241ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿ ಶಿಬಿರದಲ್ಲಿ ಉಪಸ್ಥಿತರಿದ್ದ 60 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಧರ್ಮಸ್ಥಳದ ಮಹಾವೀರ ಅಜ್ರಿ, ಧನಕೀರ್ತಿ ಆರಿಗ, ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಕುಮಾರ್, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಅವರು ಶಿಬಿರಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ಮತ್ತು ಸಲಹೆ ನೀಡಿದರು.
ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಕುಮಾರ್ ಟಿ., ಆರೋಗ್ಯ ಸಹಾಯಕಿ ಸೌಮ್ಯ, ಶಿಬಿರದ ಆಪ್ತ ಸಲಹೆಗಾರ ಮಧು ಜಿ.ಆರ್. ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಫೆ.17 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.