ತಾಳ್ಮೆಯಿಂದ ಬುದ್ಧಿವಂತಿಕೆಯ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ: ಡಾ. ಜಿರಾಲ್ಡ್ ಸಂತೋಷ್ ಡಿಸೋಜ

ತಾಳ್ಮೆಯಿಂದ ಬುದ್ಧಿವಂತಿಕೆಯ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ: ಡಾ. ಜಿರಾಲ್ಡ್ ಸಂತೋಷ್ ಡಿಸೋಜ


ಮಂಗಳೂರು: ತಾಳ್ಮೆಯಿಂದ ಬುದ್ಧಿವಂತಿಕೆಯ ಚೆಸ್ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ. ಚೆಸ್ ಆಟವಾಡಲು ಶುರು ಮಾಡಿದರೆ ಅದು ಅಭ್ಯಾಸವಾಗುತ್ತದೆ. ಚೆಸ್ ಅನ್ನೋದು ಕುತೂಹಲಕಾರಿ ಆಟ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ‌ ಶಿಕ್ಷಣ ನಿರ್ದೇಶಕ ಡಾ. ಜರಾಲ್ಡ್ ಸಂತೋಷ್ ಡಿಸೋಜ ಹೇಳಿದರು.


ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಪಂದ್ಯಾಟ 'ಚದುರಂಗ-2025'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಚೆಸ್ ಆಟದಿಂದ ನಮ್ಮ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇದರೊಂದಿದೆ  ಏಕಾಗ್ರತೆಯನ್ನು ಹೆಚ್ಚಿಸಲು ಅವಶ್ಯವಾಗಿದೆ‌ ಎಂದ ಅವರು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಆಟೋಟಗಳಲ್ಲೂ ಭಾಗವಹಿಸುವಂತೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ಚೆಸ್ ಕ್ರೀಡಾಕೂಟದ ಆಯೋಜನೆಯೊಂದಿಗೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನು ಉತ್ತಮ‌ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ‌ ಶಿಕ್ಷಣ ನಿರ್ದೇಶಕ ಡಾ. ಜರಾಲ್ಡ ಸಂತೋಷ್ ಡಿಸೋಜ ಅವರನ್ನು ಗೌರವಿಸಲಾಯಿತು.

ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್,  ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯ ಉಪಸ್ಥಿತರಿದ್ದರು.


ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ, ಸಂಯೋಜಕಿ ಶುಭ ಕೆ.ಹೆಚ್. ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ, ಸಹ ಸಂಯೋಜಕಿ ಡಾ. ಅಪರ್ಣ ಆಳ್ವ ಎನ್., ಕ್ರೀಡಾ ಕಾರ್ಯದರ್ಶಿಗಳಾದ ಗಗನ್ ಎಸ್. ಸುವರ್ಣ, ಸಾಕ್ಷ ಎಸ್. ಇದ್ದರು.

ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿದ್ದು, ಪ್ರಥಮ‌ ಸ್ಥಾನವನ್ನು ವಾಮದಪದವು ಕಾಲೇಜಿನ ತೇಜಸ್ವಿನಿ, ದ್ವಿತೀಯ ಸ್ಥಾನವನ್ನು ಸುಳ್ಯ ಕಾಲೇಜಿನ ಮನೀಶ್ ರೈ ಬಿ., ತೃತೀಯ ಹಾಗೂ ಚತುರ್ಥ ಸ್ಥಾನವನ್ನು ರಥಬೀದಿ ಕಾಲೇಜಿನ ಚೈತನ್ಯ ಹಾಗೂ ಸುದೀಪ್ ಪಡೆದುಕೊಂಡರು. ಸಮಗ್ರ ಚಾಂಪಿಯನ್ ಶಿಪ್ ನಲ್ಲಿ ರಥಬೀದಿ ಕಾಲೇಜಿನ ತಂಡ ಪ್ರಥಮ, ಸುಳ್ಯ ಕಾಲೇಜಿನ ತಂಡ ದ್ವಿತೀಯ, ಬೈಂದೂರು ಕಾಲೇಜಿನ ತಂಡ ತೃತೀಯ ಹಾಗೂ ವಾಮದಪದವು ಕಾಲೇಜಿನ ತಂಡ ಚತುರ್ಥಕ್ಕೆ ತೃಪ್ತಿ ಪಟ್ಟಿತು.















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article