
ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್ ಕಂಪನಿಯ ಕ್ಯಾಂಪಸ್ ನೇಮಕಾತಿಗೆ ಚಾಲನೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ವತಿಯಿಂದ ಕಾಲೇನಿನ ಸ್ನಾತಕೋತ್ತರ ಸಭಾಭವನದಲ್ಲಿ ಓಪ್ಟಮ್ ಕಂಪನಿಯ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕೇವಲ ಪದವಿ ಹಾಗೂ ಅಂಕಗಳನ್ನು ಪಡೆದರೆ ಯಶಸ್ವಿಯಾಗಲು ಅಸಾಧ್ಯ. ವೃತ್ತಿಪರತೆ, ನಮ್ಮ ವರ್ತನೆ, ಕರ್ತವ್ಯ ನಿಷ್ಠೆ, ನೈತಿಕತೆ ಮತ್ತು ಬದ್ಧತೆ ನಮ್ಮನ್ನು ಯಾವುದೇ ಕ್ಷೇತ್ರದಲ್ಲೂ ಯಶಸ್ವಿಯಾಗಲು ಸಹಕಾರಿಯಾಗುತ್ತವೆ. ಹಲವಾರು ವರ್ಷಗಳ ಸೇವಾನುಭವವಿದ್ದರೂ ವೃತ್ತಿಪರತೆ ಇರದಿದ್ದಲ್ಲಿ ಬಹಳ ಕಷ್ಟವಾಗುತ್ತದೆ. ಅಭ್ಯರ್ಥಿಗಳು ವೇತನದ ಪ್ಯಾಕೇಜ್ ಬಗ್ಗೆ ಮಾತ್ರ ತಿಳಿದುಕೊಂಡರೆ ಸಾಲದು ಉದ್ಯೋಗಕ್ಕೆ ಬೇಕಾದ ಅರ್ಹತೆ ಇದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿ ಕ್ಯಾಂಪಸ್ ನೇಮಕಾತಿಗೆ ಹಾಜರಾದ ಅಭ್ಯರ್ಥಿಗಳಿಗೆ ಶುಭಹಾರೈಸಿದರು.
ನೇಮಕಾತಿ ಪ್ರಕ್ರಿಯೆಯ ನೇತೃತ್ವವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಓಪ್ಟಮ್ ಕಂಪನಿಯಲ್ಲಿ ಟ್ಯಾಲೆಂಟ್ ಹಂಟ್ನ ಮುಖ್ಯಸ್ಥರಾಗಿರುವ ಕ್ಲೆಮೆಂಟ್ ಜೋಯಲ್ ಸಿಕ್ವೆರಾರವರು ಓಪ್ಟಮ್ ಕಂಪನಿಯ ಕುರಿತು, ಮೆಡಿಕಲ್ ಕೋಡಿಂಗ್‌ಗೆ ಬೇಕಾದ ಅರ್ಹತೆಗಳ ಬಗ್ಗೆ ವಿವರಿಸಿದರು.
ಪ್ರಥಮ ಬಿಕಾಂ ವಿದ್ಯಾರ್ಥಿನಿಯರಾದ ಅವನಿ ಮತ್ತು ಅಪೂರ್ವ ಪ್ರಾರ್ಥಿಸಿದರು. ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಡಾ. ಗೀತಾ ಪೂರ್ಣಿಮಾ ಕೆ. ಸ್ವಾಗತಿಸಿದರು. ಪರೀಕ್ಷಾಂಗ ಉಪಕುಲಸಚಿವ ಪ್ಲೇಸ್ಮೆಂಟ್ ಆಫೀಸರ್ ಅಭಿಷೇಕ್ ಸುವರ್ಣ ವಂದಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಧನ್ಯ ಪಿ.ಟಿ. ವಂದಿಸಿದರು.
ಓಪ್ಟಮ್ ಕಂಪನಿಯ ಮೆಡಿಕಲ್ ಕೋಡಿಂಗ್ ವಿಭಾಗದ ವ್ಯವಸ್ಥಾಪಕಿ ದಿವ್ಯ ದರ್ಶನ್ ಬಿ.ಪಿ. ಹಾಗೂ ನೇಮಕಾತಿ ತಜ್ಞರಾದ ವಾರೆನ್ ಡಿ’ಕೋಸ್ಟ ಉಪಸ್ಥಿತರಿದ್ದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಹಾಗೂ ಸ್ನಾತಕೋತ್ರ ವಾಣಿಜ್ಯಸಾಸ್ತ್ರ ವಿಭಾಗದ ಸಂಯೋಜಕ ಹರ್ಷಿತ್ ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುತ್ತೂರಿನ ಸುತ್ತಮುತ್ತಲಿನ ನೂರೈವತ್ತಕ್ಕೂ ಅಧಿಕ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.