
ಮೆಸ್ಕಾಂ ಕಾಯ೯ನಿವಾ೯ಹಕ ಎ೦ಜಿನಿಯರ್ ಜೋವಾನ್ ಫ್ರಾನ್ಸಿಸ್ ಅವರಿಗೆ ಬೀಳ್ಕೊಡುಗೆ
Saturday, March 1, 2025
ಮಂಗಳೂರು: ಮೆಸ್ಕಾಂನಲ್ಲಿ 25 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕಾಯ೯ನಿವಾ೯ಹಕ ಇ೦ಜಿನಿಯರ್ ಆಗಿ ಸ್ವಯ೦ ನಿವೃತ್ತಿ ಪಡೆದ ಜೋವಾನ್ ಫ್ರಾನ್ಸಿಸ್ ಅವರಿಗೆ ಸಂಸ್ಥೆಯ ವತಿಯಿಂದ ಶುಕ್ರವಾರ ಬೀಳ್ಕೊಡುಗೆಯೊಂದಿಗೆ ಸನ್ಮಾನಿಸಲಾಯಿತು.
ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದ ಮೆಸ್ಕಾ೦ ಮುಖ್ಯ ಆರ್ಥಿಕ ಅಧಿಕಾರಿ ಬಿ. ಹರೀಶ್ಚಂದ್ರ ಅವರು ಜೋವಾನ್ ಫ್ರಾನ್ಸಿಸ್ ಅವರನ್ನು ಸಮ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್ ಅವರು ಜೋವಾನ್ ಫ್ರಾನ್ಸಿಸ್ ಅವರು ಸ೦ಸ್ಥೆಗೆ ನೀಡಿದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಜೋವಾನ್ ಫ್ರಾನ್ಸಿಸ್ ಅವರು ಮಾತನಾಡಿ, ಮೆಸ್ಕಾ೦ನಲ್ಲಿ ಸೇವಾ ಅವಧಿ ನನ್ನ ಬದುಕಿನಲ್ಲಿ ಅವಿಸ್ಮರಣೀಯ ದಿನಗಳಾಗಿವೆ. ಸಂಸ್ಥೆಗೆ ಅವಧಿಯಲ್ಲಿ ಮಾರ್ಗದರ್ಶನ, ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು.
ಜೋವಾನ್ ಫ್ರಾನ್ಸಿಸ್ ಅವರ ಪತಿ ಜೋಯ್ ಉಪಸ್ಥಿತರಿದ್ದರು. ರಘುರಾಮ್ ಶೆಟ್ಟಿ ನಿರೂಪಿಸಿದರು. ಪ್ರಭಾತ್ ಜೋಷಿ ಸ್ವಾಗತಿಸಿ, ಅರುಣಾ ಕುಮಾರಿ ವ೦ದಿಸಿದರು.