
ಅಶ್ಲೀಲ ವೀಡಿಯೋ: ಹಣಕ್ಕಾಗಿ ಹುಡುಗಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನ ಬಂಧನ
Saturday, March 1, 2025
ಮೂಡುಬಿದಿರೆ: ತನ್ನ ಬಳಿ ನಿಮ್ಮ ಅಶ್ಲೀಲ ವೀಡಿಯೋ ಇದೆ ಎಂದು ಅಮಾಯಕ ಹುಡುಗಿಯರನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದವನನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊಸ್ಮಾರಿನ ಸತೀಶ್ ಎಂಬಾತ ಬಂಧಿತ.
ಈತ ಫೇಕ್ ಇನ್ಸ್ಟ್ರಾಗ್ರಾಮ್ ಐಡಿ,ಫೇಸ್ ಬುಕ್ ಐಡಿ ಮೂಲಕ ಅಮಾಯಕ ಹುಡುಗಿಯರ ಮೊಬೈಲ್ ನಂಬರನ್ನು ಪಡೆದು ಅವರಿಗೆ ಕಾಲ್ ಮಾಡಿ ‘ ನಿಮ್ಮ ಅಶ್ಲೀಲ ವೀಡಿಯೊ ಇದೆ, ಹಣ ಕೊಡದಿದ್ದರೆ ವೀಡಿಯೋ ವೈರಲ್ ಮಾಡುತ್ತೇನೆ’ ಎಂದು ಬೆದರಿಸುತ್ತಿದ್ದ.
ಈಬಗ್ಗೆ ಮಹಿಳೆಯೊಬ್ಬರು ಮಂಗಳೂರು ಪೂರ್ವ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಪೂರ್ವ ಠಾಣಾ ಪೊಲೀಸರು ಆರೋಪಿಯನ್ನು ಬ್ಲಾಕ್ ಮೇಲ್ ಗೆ ಉಪಯೋಗಿಸುತ್ತಿದ್ದ ಮೊಬೈಲ್ ಸಮೇತ ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಪೂರ್ವ ಠಾಣಾ ನಿರೀಕ್ಷಕ ಸೋಮಶೇಖರ್, ಉಪನಿರೀಕ್ಷಕ ಮನೋಹರ ಪ್ರಸಾದ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.