
ಮಂಗಳೂರಿಗೆ ಖೇಲೋ ಇಂಡಿಯಾ ಕೇಂದ್ರ ತರಲು ಅವಕಾಶ: ನವೀನ್
ಮಂಗಳೂರು: ಪಾಂಡೇಶ್ವರ ಬಳಿ ಇರುವ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳವು ಅಂತಾರಾಷ್ಟ್ರೀಯ ಮಟ್ಟದ ಈಜುಗಾರರನ್ನು ರೂಪಿಸಲು ಆವಶ್ಯಕ ಸೌಲಭ್ಯಗಳನ್ನು ಹೊಂದಿದ್ದು, ಕರಾವಳಿಯಲ್ಲಿ ಅತ್ಯುತ್ತಮ ಈಜುಗಾರರು ಕೂಡ ಇದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಖೇಲೋ ಇಂಡಿಯಾ ಕೇಂದ್ರ ತರಲು ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಎಮ್ಮೆಕೆರೆ ಈಜುಕೊಳದ ನಿರ್ದೇಶಕ ನವೀನ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್‌ಐಎನ್‌ಎ) ನಿಗದಿಪಡಿಸಿದ ಮಾನದಂಡ ಆಧರಿಸಿ ಎಮ್ಮೆಕೆರೆ ಈಜುಕೊಳ ನಿರ್ಮಾಣಗೊಂಡಿದ್ದು, ಖೇಲೋ ಇಂಡಿಯಾ ಯೋಜನೆಗಳಿಗೆ ಅವಕಾಶ ಪಡೆದ ಕ್ರೀಡಾಪಟುಗಳು ಅಧಿಕ ಸಂಖ್ಯೆಯಲ್ಲಿ ಈ ಭಾಗದಲ್ಲಿ ಸೃಷ್ಟಿಯಾದರೆ ರಾಜ್ಯ ಈಜು ಸಂಸ್ಥೆಯ ಸಹಕಾರದೊಂದಿಗೆ ಮಂಗಳೂರಿಗೆ ಖೇಲೋ ಇಂಡಿಯಾ ಕೇಂದ್ರ ಪಡೆಯಲು ಸುಲಭವಾಗುತ್ತದೆ. ಈ ಸೌಲಭ್ಯ ಪಡೆಯಲು ದಕ್ಷಿಣ ಕನ್ನಡ ಹಾಗೂ ಆಸುಪಾಸಿನ ಜಿಲ್ಲೆಗಳ ಕ್ರೀಡಾಪಟುಗಳು ಈ ಸೌಲಭ್ಯ ಪಡೆಯಲು ಬೆಂಗಳೂರುನಂತಹ ನಗರಕ್ಕೆ ತೆರಳುವ ಅನಿವಾರ್ಯತೆ ತಪ್ಪುತ್ತದೆ ಎಂದರು.
ಸರ್ಕಾರವು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಿರ್ಮಿಸಿದ ಎಮ್ಮೆಕೆರೆ ಈಜುಕೊಳವು ರಾಷ್ಟ್ರದಲ್ಲಿರುವ 10 ಅಂತಾರಾಷ್ಟ್ರೀಯ ಈಜುಕೊಳಗಳ ಪೈಕಿ ಒಂದಾಗಿದೆ. ಇಲ್ಲಿ ನೀರಿನ ಗುಣಮಟ್ಟವನ್ನು ಕಾಪಾಡಲು 7.25 ರಿಂದ 7.50 ಪಿ.ಎಚ್ ಮಟ್ಟವನ್ನು ಕಾಯ್ದುಕೊಂಡು ಬರಲಾಗುತ್ತಿದೆ. ಇದನ್ನು ಡಿವೈಇಸ್ ಅಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಅಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅಖಇಅ, ಘೆಐಖ, ಅ?ಠಠಿಡಿಜಿಞ, ಓಖಅ, ಖಊಐ ತರಬೇತಿದಾರರು ಹಾಗೂ ಜೀವ ರಕ್ಷಕರು ಈಜುಕೊಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿ ವನ್ ಅಕ್ವಾ ಸೆಂಟರ್‌ನ ಅಧ್ಯಕ್ಷ ಮಧುರಾಜ್, ಗೌರವ ಅಧ್ಯಕ್ಷ ಡಾ.ನಾಗೇಂದ್ರ, ಪಾಲುದಾರೆ ರೂಪಾ ಜಿ.ಪ್ರಭು, ಹಿರಿಯ ತರಬೇತುದಾರ ಲೋಕರಾಜ ವಿಟ್ಲ, ಶೆರ್ಲಿ ರೇಗೋ ಉಪಸ್ಥಿತರಿದ್ದರು.