
ವೆನ್‌ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂಆರ್‌ಪಿಎಲ್ ನೆರವು: ಸಂಸದರಿಂದ ಹಸ್ತಾಂತರ
Saturday, March 29, 2025
ಮಂಗಳೂರು: ಎಂಆರ್‌ಪಿಎಲ್ ಸಂಸ್ಥೆ ವತಿಯಿಂದ ಸಿಎಸ್‌ಆರ್ ನಿಧಿಯಿಂದ ವೆನ್‌ಲಾಕ್ ಆಸ್ಪತ್ರೆ ಹಾಗೂ ಪಿಲಿಕುಲ ನಿಸಗ೯ಧಾಮಕ್ಕೆ ಕೊಡುಗೆ ನೀಡಲಾಯಿತು.
ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಸ್‌ಆರ್ ಪತ್ರವನ್ನು ಅಧಿಕಾರಿಗಳಿಗೆ ವಿತರಿಸಿದರು.
ಈ ನಿಧಿಯಿಂದ ವೆನ್‌ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೂತನವಾದ ಸಜಿ೯ಕಲ್ ವಾಡ್೯ ನಿಮಾ೯ಣಗೊಳ್ಳಲಿದ್ದು, ಹೊಸದಾಗಿ 132 ಹಾಸಿಗೆಗಳು ಸೇಪ೯ಡೆಗೊಳ್ಳಲಿವೆ.
ಪಿಲಿಕುಲ ವಿಜ್ಞಾನ ಕೇಂದ್ರ ಆವರಣದಲ್ಲಿ 5.43 ಕೋಟಿ ರೂ. ವೆಚ್ಚದಲ್ಲಿ ಖಗೋಳ ಶಾಸ್ತ್ರ ಗ್ಯಾಲರಿ ನಿಮಾ೯ಣಗೊಳ್ಳಲಿದೆ.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಎಂಆರ್‌ಪಿಎಲ್ ಎಂಡಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್, ವೆನ್‌ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಪಿಲಿಕುಲ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.