ಕ್ರಿಮಿನಲ್‌ಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ಅಭಿನಂದಿಸಿದ ವಿಶ್ವ ಹಿಂದೂ ಪರಿಷತ್

ಕ್ರಿಮಿನಲ್‌ಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ಅಭಿನಂದಿಸಿದ ವಿಶ್ವ ಹಿಂದೂ ಪರಿಷತ್

ಮಂಗಳೂರು: ಮಾದಕ ವಸ್ತು ಮತ್ತು ಪಿಸ್ತೂಲ್ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಕ್ರಿಮಿನಲ್‌ಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್ ಪ್ರಕಟಣೆಯಲ್ಲಿ ಅಭಿನಂದಿಸಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ದುಷ್ಕ್ರತ್ಯ ನಡೆಸಲು ಸಂಚು ರೂಪಿಸುತ್ತಿದ್ದ 5 ಜನ ಅಂತರಾಜ್ಯ ಕ್ರಿಮಿನಲ್ ಅದ ಮಹಮ್ಮದ್ ಅಲಿ, ಮಹಮ್ಮದ್ ಅಸ್ಗರ್, ಮನ್ಸೂರ್, ನೌಫಲ್ ಮತ್ತು ಅಬ್ದುಲ್ ಲತೀಪ್‌ನನ್ನು ಮಾದಕ ವಸ್ತು ಹಾಗೂ ಸಜೀವ ಮದ್ದುಗುಂಡು ಸಹಿತ ಪಿಸ್ತೂಲ್‌ಗಳನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕುಕೃತ್ಯ ನಡೆಸಲು ಸಂಚು ರೂಪಿಸಿದವರನ್ನು ಬಂಧಿಸಿ ಕರಾವಳಿ ಭಾಗದಲ್ಲಿ ಅಗುವ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಪೊಲೀಸರ ಈ ಕಾರ್ಯವನ್ನು ಅಭಿನಂದನೆ.

ಸಕ್ರಿಯಗೊಂಡ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು: ಎನ್‌ಐಎ ತನಿಖೆಗೆ ಅಗ್ರಹ

ಮಂಗಳೂರು ಪೊಲೀಸರು ಬಂಧಿಸಿದ ಆರೋಪಿಗಳು ನಿಷೇದಿತ ಪಿಎಫ್‌ಐ ದೇಶದ್ರೋಹಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ, ಕರಾವಳಿಯಲ್ಲಿ ಹಿಂದೂ ನಾಯಕರುಗಳನ್ನು, ಹಿಂದೂಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆ ನಡೆಸುವ ಉದ್ದೇಶದಿಂದ ದುಷ್ಕತ್ಯ ನಡೆಸಲು ಸಂಚು ರೂಪಿಸುತಿದ್ದಾರೆ ಎಂಬ ಬಲವಾದ ಶಂಕೆ ವ್ತಕ್ತವಾಗುತ್ತಿದೆ. 

ಆರೋಪಿಗಳಲ್ಲಿ 5 ಪಿಸ್ತೂಲ್‌ಗಳು, ಸಜೀವ ಮದ್ದುಗುಂಡು ಸಹಿತ ಕೆ.ಜಿ. ಗಟ್ಟಲೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಿಂದ ಕರಾವಳಿಯಲ್ಲಿ ನಿಷೇದಿತ ಪಿಎಫ್‌ಐ ಸಂಘಟನೆಯವರು ಸಕ್ರೀಯವಾಗಿದ್ದು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಗಲಭೆ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ ಆದ್ದರಿಂದ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಇವರು ಸಡೆಸಲು ಉದ್ದೆಶಿಸಿರುವ ಪೂರ್ವಯೋಜಿತ ದುಷೃತ್ಯದ ಸತ್ಯಾಸತ್ಯತೆಯನ್ನು ತಿಳಿಯಲು ರಾಷ್ಟೀಯ ತನಿಖಾದಳದ ಮೂಲಕ ತನಿಖೆ ನಡೆಸಬೇಕೇಂದು ರಾಜ್ಯ ಸರಕಾರಕ್ಕೆ ವಿಹೆಚ್‌ಪಿ ಅಗ್ರಹಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article