
ರಥಬೀದಿ ಪದವಿ ಕಾಲೇಜಿಗೆ ಎಂ.ಎ. (ರಾಜ್ಯಶಾಸ್ತ್ರ)ದಲ್ಲಿ ಫ್ರಥಮ ರ‍್ಯಾಂಕ್
Thursday, March 13, 2025
ಮಂಗಳೂರು: 2023-24ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂ.ಎ(ರಾಜ್ಯಶಾಸ್ತ್ರ) ಪರೀಕ್ಷೆಯಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾದ ಜೋಸ್ಲಿನ್ ಡಿ’ಸೋಜಾ ಇವರು ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.
ಜೊತೆಗೆ ಶ್ರೀಮತಿ ಸಿಪ್ರಿಯನ್ ಕಾರ್ನೆಲಿಯೊ ಸ್ಮಾರಕ ಚಿನ್ನದ ಪದಕ, ಲೊಯೆಲ್ಲೊ ಲೋಬೋ ಪ್ರಭು ಹಾಗೂ ಹನುಮಾನ ಗಜಾನನ ಆಟೋಮೊಬೈಲ್ ನಗದು ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ರಾಜ್ಯಶಾಸ್ತ್ರ ವಿಭಾಗದ ಹಾಗೂ ಇತರ ಎಲ್ಲಾ ಬೋಧಕ/ಬೋಧಕೇತರರು, ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಕಾಲೇಜು ಪೋಷಕರಾದ ಡಾ. ಪಿ. ದಯಾನಂದ ಪೈ-ಪಿ ಸತೀಶ್ ಪೈ ಸಹೋದರರು, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.