
ಸ್ಕೂಟರ್ ಹಿಂಭಾಗಕ್ಕೆ ಲಾರಿ ಢಿಕ್ಕಿ: ಹಿಂಬದಿ ಸವಾರ ಮೃತ್ಯು
Thursday, March 13, 2025
ಮಂಜೇಶ್ವರ: ಸ್ಕೂಟರ್‌ನ ಹಿಂಬಾಗಕ್ಕೆ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಚಾಲಕ ಮೃತಪಟ್ಟ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಬಳಿಯ ಉದ್ಯಾವರದಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಉಪ್ಪಳ ನಿವಾಸಿ ಅನ್ವಾಸ್ (24) ಮೃತಪಟ್ಟಿದ್ದು, ಬೈಕ್ ಸವಾರ ಅಂಗಡಿಮೊಗರು ನಿವಾಸಿ ಫಸಲ್ ರಹಿಮಾನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ತಾವು ತೆರಳುವ ಇಲೆಕ್ಟ್ರಿಕ್ ಸ್ಕೂಟರ್‌ನ್ನು ಚಾರ್ಚ್ ಮಾಡಲು ತಲಪಾಡಿ ಭಾಗಕ್ಕೆ ತೆರಳುವ ವೇಳೆ ಘಟನೆ ನಡೆದಿದೆ.
ಮಾಹಿತಿಯನ್ನರಿತು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.