ಮೆಸ್ಕಾ೦: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೆಸ್ಕಾ೦: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ


ಮ೦ಗಳೂರು: ಮ೦ಗಳೂರು ವಿದ್ಯುಚ್ಚಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾ೦) ವತಿಯಿ೦ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾ.15 ರ೦ದು ನಗರದ ಕಾವೂರು ಕವಿಪ್ರನಿನಿ ನೌಕರರ ಸಭಾಭವನದಲ್ಲಿ ಜರಗಿತು.

ಮಹಿಳಾ ದಿನಾಚರಣೆಯನ್ನು ಮೆಸ್ಕಾ೦ ವ್ಯವಸ್ಥಾಪಕ ನಿದೇ೯ಶಕ ಜಯಕುಮಾರ್ ಆರ್. ಹಾಗೂ ಸುಹಾಸಿನಿ ಜಯಕುಮಾರ್ ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಕುಟು೦ಬದ ಏಳಿಗೆಗೆಗಾಗಿ ಆಕೆ ವಹಿಸುವ ಶ್ರಮ, ಮಾಡುವ ತ್ಯಾಗ ಅಪಾರ. ಅದ್ದರಿ೦ದಲೇ ನಮ್ಮ ದೇಶದಲ್ಲಿ ಮಹಿಳೆಯನ್ನು ಭೂಮಿ ತಾಯಿಗೆ ಹೋಲಿಸಿದ್ದಾರೆ. ಮಾತೃ ದೇವೋಭವ ಎ೦ದು ಪರಿಗಣಿಸಿದ್ದಾರೆ.ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎ೦ದರು. 

ತಾ೦ತ್ರಿಕ ನಿದೇ೯ಶಕರಾದ ಕೆ.ಎ೦. ಮಹಾದೇವ ಸ್ವಾಮಿ ಪ್ರಸನ್ನ ಅವರು ಮಾತನಾಡಿ ಕುಟು೦ಬ, ಸಮಾಜ, ರಾಷ್ಟ್ರ ನಿಮಾ೯ಣದಲ್ಲಿ ಮಹಿಳೆಗೂ ಕೊಡುಗೆ, ಆಕೆ ವಹಿಸುವ ಪಾತ್ರ ಮಹತ್ತರವಾದುದು ಎ೦ದರು. ಮಹಿಳೆ ಎಷ್ಟೆ ಒತ್ತಡಗಳಿದ್ದರೂ ಅದನ್ನು ಸಮಥ೯ವಾಗಿ ನಿವ೯ಹಿಸಿ ಕೌಟು೦ಬಿಕವಾಗಿ, ಔದ್ಯೋಗಿಕವಾಗಿ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ನಮ್ಮ ಸ೦ಸ್ಕೃತಿಯಲ್ಲಿ ಮಹಿಳೆಯನ್ನು ದೇವತಾ ಸ್ಪರೂಪಿಣಿಯಾಗಿ ಕಾಣಲಾಗುತ್ತದೆ ಎ೦ದರು.

ಮುಖ್ಯ ಅಥಿ೯ಕ ಅಧಿಕಾರಿ ಬಿ. ಹರಿಶ್ಚಂದ್ರ, ಅಥಿ೯ಕ ಸಲಹೆಗಾರ ಮುರಲೀಧರ ನಾಯಕ್, ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್, ಕ೦ಪೆನಿ ಕಾಯ೯ದಶಿ೯ ಪ್ರಭಾತ್ ಜೋಶಿ, ಕವಿಪ್ರನಿನಿ ನೌಕರರ ಸ೦ಘದ ಪದಾಧಿಕಾರಿಗಳಾದ ಗುರುಮೂತಿ೯, ಶ್ರೀನಿವಾಸಪ್ಪ, ತೇಜಸ್ಪಿ, ನವೀನ್ ಕುಮಾರ್, ಮಹಿಳಾ ದಿನಾಚರಣೆ ಸಮಿತಿಯ ವಿನುತಾ, ಭಾರತಿ, ಮೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಟಿ.ಆರ್. ಜಯಶಂಕರ್ ಉಪಸ್ಥಿತರಿದ್ದರು. 

ಮಹಿಳಾ ದಿನಾಚರಣೆ ಸಮಿತಿಯ ಸೀಮಾ ಸ್ವಾಗತಿಸಿ, ಬೀನಾ ನಿರೂಪಿಸಿದರು. ನಯನಾ ವ೦ದಿಸಿದರು. ಮಹಿಳಾ ದಿನಾಚರಣೆ ಅ೦ಗವಾಗಿ ಮಹಿಳೆಯರಿಗಾಗಿ ವಿವಿಧ ಮನೋರ೦ಜನಾ ಸ್ಫಧೆ೯ಗಳು, ಸಾ೦ಸ್ಕೃತಿಕ ಕಾಯ೯ಕ್ರಮಗಳು ಜರಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article