
ಸೂಲಿಬೆಲೆ, ಮುತಾಲಿಕ್‌ರಂತವರನ್ನು ಸರಕಾರ ನಿಯಂತ್ರಿಸಲು ಅಸಾಧ್ಯವಾದರೆ ವಧುಬಾಗ್ಯ ನಿಧಿಯನ್ನಾದರೂ ಮೀಸಲು ಇರಿಸಲಿ: ಕೆ. ಅಶ್ರಫ್
ಮಂಗಳೂರು: ವೈದಿಕ ಸಮಾಜದ ಸೂಲಿ ಬೆಲೆ, ಮುತಾಲಿಕ್‌ರಂತಹ ದ್ವೇಷ ಭಾಷಿತ ಪುರುಷೋತ್ತಮರಿಗೆ ಸಮರ್ಪಕ ವಧು ಲಭ್ಯವಾಗದೆ ಇದ್ದು, ಈ ಕಾರಣದಿಂದ ಸಮಾಜದಲ್ಲಿ ಅಶಾಂತಿ, ವಿದ್ವೇಶ, ಉದ್ವಿಗ್ನತೆ ಸೃಷ್ಟಿ ಆಗುತ್ತಿದ್ದು ಸರಕಾರ ಇಂತವರ ಸಂಸಾರ ಕಲ್ಯಾಣಕ್ಕಾಗಿ ಸರಕಾರದ ಬೊಕ್ಕಸದಿಂದ ವಧು ಹುಡುಕಿ ಕೊಡಲು ಬ್ರೋಕರೇಜ್ ಮೊತ್ತ ಪಾವತಿ ಸವಲತ್ತಿಗಾಗಿ ಬಹುಕೋಟಿ ನಿಧಿ ಮೀಸಲು ಇರಿಸಬೇಕಿದೆ.
ವೈದಿಕ ಸಮಾಜದಲ್ಲಿ ಹೆಣ್ಣು ನಿರಾಕರಿಸಲ್ಪಟ್ಟು, ಸ್ವಂತ ಸಂಸಾರ ನಡೆಸಲು ಆಗದೆ, ಅಬ್ಬೇಪಾರಿಯಾಗಿ ಬೀದಿಗೆ ಬಂದು, ಉಂಡಾಡಿ ಗುಂಡಂದಿರಾಗಿ, ಕಂಡವರ ಮನೆಯಲ್ಲಿ ಪುಕ್ಸಟ್ಟೆ ಉಂಡು, ಅತ್ತ ಕುಟುಂಬಕ್ಕೂ ಇತ್ತ ಸಮಾಜಕ್ಕೂ ದಕ್ಕದೇ, ಭಿನ್ನ ಕೋಮುಗಳ ಮಧ್ಯೆ ಲವ್ ಜಿಹಾದ್, ಘರ್ ವಾಪಸಿ ಎಂಬಿತ್ಯಾದಿ ಇಲ್ಲದ ಸುಳ್ಳುಗಳನ್ನು ಪೋಣಿಸಿ, ಉದುರಿಸಿ, ಪ್ರಚೋದನಕಾರಿ ಕೃತಿ ರಚಿಸಿ ಹಂಚಿ ಸಮಾಜವನ್ನು ಒಡೆದು ಹಾಕುವ ಇಂತವರ ಸಂಸಾರ ಕಲ್ಯಾಣಕ್ಕಾಗಿ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ.
ಸೂಲಿ ಬೆಲೆ ಇತ್ತೀಚೆಗೆ ತನ್ನ ಕೋಮು ಬಾಷಣದಲ್ಲಿ ಯುವಕರು ಅನ್ಯ ಕೋಮಿನ ಯುವತಿಯರನ್ನು ಪ್ರೀತಿಸಿ ವಿವಾಹ ಆಗಬೇಕು ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದಾರೆ. ಸರಕಾರ ಇಂತಹ ವೈದಿಕ ಅಬ್ಬೇಪಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ನಿಯಂತ್ರಣ ಗೊಳಿಸಬೇಕು, ಇಲ್ಲವಾದಲ್ಲಿ ವೈದಿಕ ಮುತಾಲಿಕ್, ಸೂಲಿಬೆಲೆಯಂತವರಿಗೆ ವಧು ಹುಡುಕಿ ವಿವಾಹವನ್ನು ಮಾಡಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ.
ಸರಕಾರ ಬೊಕ್ಕಸದಿಂದ ಅಥವಾ ಬಜೆಟ್‌ನಲ್ಲಿ ವೈದಿಕ ಸಮಾಜದ ಹೆಣ್ಣು ನಿರಾಕರಿತ ಸಂತ್ರಸ್ತ ಅಬ್ಬೇಪಾರಿ ಕೋಮು ವಿಧ್ವೇಷ ಬಾಷಿತ ವ್ಯಕ್ತಿಗಳ ಯೋಗಕ್ಷೇಮಕ್ಕಾಗಿ ಸಮಗ್ರ ಯೋಜನೆ ರೂಪಿಸಿ ವಧು ಹುಡುಕಲು ಬ್ರೋಕರೇಜ್ ಪಾವತಿಸಲು ಬಹುಕೋಟಿ ನಿಧಿ ಮೀಸಲು ಇರಿಸಬೇಕು.
ಸರಕಾರದ ಬಜೆಟ್ ಅನ್ನು ಮುಸ್ಲಿಮ್ ಬಜೆಟ್ ಎಂದು ಅಪಹಾಸ್ಯ ಗೊಳಿಸುವ ವೈದಿಕ ಪ್ರೇರಿತ ಸಂಘಿ ಹೇಳಿಕೆದಾರರು ಇಂತಹ ಬ್ರೋಕರ್ ನಿಧಿಯನ್ನು ಉಪಯೋಗಿಸಲು ಮುಂದೆ ಬರಬೇಕಿದೆ ಮತ್ತು ಸೊಲಿ ಬೆಲೆ, ಮುತಾಲಿಕ್ ರಂತವರಿಗೆ ವಧುಭಾಗ್ಯ ಕರುಣಿಸಬೇಕಿದೆ. ಮತ್ತು ಇಂತವರು ಮತೀಯ ವಿದ್ವೇಷ ಹೇಳಿಕೆಯನ್ನು ಇನ್ನಾದರೂ ನಿಲ್ಲಿಸಲಿ ಎಂದು ದ.ಕ. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.